ದುಬೈ: ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೋ ಪಾಕ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಂದ್ಯದ 18ನೇ ಓವರ್ ಬೌಲ್ ಮಾಡುತ್ತಿದ್ದ ಪಾಂಡ್ಯ ತಮ್ಮ ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ. ಈ ವೇಳೆ ಮೈದಾನದಲ್ಲೇ ಮಲಗಿದ್ದ ಪಾಂಡ್ಯರನ್ನು ಟೀಂ ಇಂಡಿಯಾ ತಂಡದ ವೈದ್ಯರು ಬಂದು ಉಪಚರಿಸಿದರು. ಬಳಿಕ ವೈದ್ಯರ ಸಲಹೆಯಂತೆ ಸ್ಟ್ರೆಚರ್ ಮೂಲಕ ಪಾಂಡ್ಯರನ್ನು ಮೈದಾನದಿಂದ ಹೊರತರಲಾಯಿತು. ಹಾರ್ದಿಕ್ ಓವರಿನ ಕೊನೆಯ ಎಸೆತವನ್ನು ಅಂಬಟಿ ರಾಯುಡು ಎಸೆದು ಆ ಓವರ್ ಪೂರ್ಣಗೊಳಿಸಿದರು.
Advertisement
Injury update – @hardikpandya7 has an acute lower back injury. He is able to stand at the moment and the medical team is assessing him now.
Manish Pandey is on the field as his substitute #TeamIndia #AsiaCup pic.twitter.com/lLpfEbxykj
— BCCI (@BCCI) September 19, 2018
Advertisement
ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಹಾರ್ದಿಕ್ ಸದ್ಯ ನಿಂತು ಕೊಳ್ಳಲು ಸಮರ್ಥರಾಗಿದ್ದು, ವೈದ್ಯಕೀಯ ತಂಡ ಅವರನ್ನು ತಪಾಸಣೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದೆ. ಪಾಂಡ್ಯ ಸ್ಥಾನದಲ್ಲಿ ಕನ್ನಡಿಗ ಮನೀಶ್ ಪಾಂಡೆ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.
Advertisement
ಟೀಂ ಇಂಡಿಯಾ ಪರ ಕಳೆದ 12 ತಿಂಗಳಲ್ಲಿ ಪಾಂಡ್ಯ 44 ಪಂದ್ಯಗಳನ್ನು ಆಡಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಪಾಂಡ್ಯ ಟೂರ್ನಿಯ ಎಲ್ಲ ಪಂದ್ಯಗಳಲ್ಲೂ ಸ್ಥಾನ ಪಡೆದಿದ್ದರು. ಉಳಿದಂತೆ ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ಒಂದು ಪಂದ್ಯಕ್ಕೆ ಮಾತ್ರ ಪಾಂಡ್ಯರನ್ನು ಕೈ ಬಿಡಲಾಗಿತ್ತು. ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ 46 ಪಂದ್ಯಗಳನ್ನು ಆಡಿದ್ದಾರೆ. ಇದನ್ನು ಓದಿ: ಬೌಂಡರಿ ಗೆರೆಯಲ್ಲಿ ಮನೀಶ್ ಪಾಂಡೆ ಅದ್ಭುತ ಕ್ಯಾಚ್ – ವೀಡಿಯೋ ನೋಡಿ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv