ಮುಂಬೈ: ಫಿಟ್‍ನೆಸ್ ಸಮಸ್ಯೆ ಮತ್ತು ಫಾರ್ಮ್ ಕಳೆದುಕೊಂಡು ಹೊರಗುಳಿದಿರುವ ಆಟಗಾರರು ರಣಜಿ ಪಂದ್ಯವನ್ನಾಡಿ ಮತ್ತೆ ಟೀಂ ಇಂಡಿಯಾದಲ್ಲಿ ಆಡಲು ಸಿದ್ಧರಾಗಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೆಲದಿನಗಳ ಹಿಂದೆ ಆಟಗಾರರಿಗೆ ಸಂದೇಶ ನೀಡಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ಗಂಗೂಲಿ ಮಾತಿಗೆ ಡೋಂಟ್ ಕೇರ್ ಅಂದಂತಿದೆ.
Advertisement
2021ರ ಟಿ20 ವಿಶ್ವಕಪ್ ಬಳಿಕ ಫಿಟ್‍ನೆಸ್ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿಯ ರಣಜಿ ಟೂರ್ನಿಯಿಂದ ವಿಶ್ರಾಂತಿ ಬಯಸಿದ್ದಾರೆ. ಬರೋಡ ಪರ ರಣಜಿ ಪಂದ್ಯವಾಡುವ ಅವಕಾಶ ಪಾಂಡ್ಯಗೆ ಇತ್ತು ಆದರೆ ಪಾಂಡ್ಯ ಮಾತ್ರ ರಣಜಿ ಪಂದ್ಯ ಆಡದಿರಲು ನಿರ್ಧರಿಸಿದ್ದಾರೆ. ಕೆಲದಿನಗಳ ಹಿಂದೆ ಗಂಗೂಲಿ, ಫಿಟ್‍ಸಮಸ್ಯೆಯಿಂದ ಹೊರಗುಳಿದಿರುವ ಆಟಗಾರೆಲ್ಲರೂ ರಣಜಿ ಪಂದ್ಯವನ್ನಾಡಿ ಫಿಟ್‍ನೆಸ್ ಸಾಬೀತು ಪಡಿಸಿಕೊಳ್ಳಿ ಎಂದು ಸೂಚಿಸಿದ್ದರು. ಆದರೆ ಪಾಂಡ್ಯ ಮಾತ್ರ ರಣಜಿ ಆಡಲ್ಲ ಎಂದು ತಂಡದಿಂದ ದೂರ ಉಳಿದಿದ್ದಾರೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್
Advertisement
Advertisement
ಮೂಲಗಳ ಪ್ರಕಾರ ಪಾಂಡ್ಯ 2022ರ ಐಪಿಎಲ್ ಫ್ರಾಂಚೈಸ್ ಅಹಮದಾಬಾದ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಹಾಗಾಗಿ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೊರಲು ರಣಜಿ ಆಡುತ್ತಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್
Advertisement
ಬಿಸಿಸಿಐ, ರಣಜಿ ಪಂದ್ಯವಾಡಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ಆಟಗಾರರಿಗೆ ಅವಕಾಶ ನೀಡಿದೆ. ಆದರೆ ಪಾಂಡ್ಯ ರಣಜಿ ಆಡದೆ ಐಪಿಎಲ್ ಕಡೆ ಹೆಚ್ಚು ಗಮನ ಹರಿಸಿರುವುದು ಕಂಡು ಬರುತ್ತಿದೆ. ಹಾಗಾಗಿ ಪಾಂಡ್ಯ ಮುಂದೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವುದು ಕಷ್ಟ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.