ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ- ಪಾಕಿಸ್ತಾನದ ರಣರೋಚಕ ಪಂದ್ಯ ವೀಕ್ಷಿಸಲು ಪ್ರತಿ ಬಾರಿ ಅಭಿಮಾನಿಗಳು ಹಾತೊರೆಯುತ್ತಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‍ನ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಕೇವಲ 5 ಗಂಟೆಯಲ್ಲಿ ಸೋಲ್ಡ್ ಔಟ್ ಆಗಿದೆ ಎಂದು ಐಸಿಸಿ ತಿಳಿಸಿದೆ.
Advertisement
ಅಕ್ಟೋಬರ್ 23 ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯ ಮೆಲ್ಬರ್ನ್ ಮೈದಾನದಲ್ಲಿ ನಡೆಯಲಿದೆ. 1 ಲಕ್ಷ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಹೊಂದಿರುವ ಮೆಲ್ಬರ್ನ್ ವಿಶ್ವದ ಅತಿ ದೊಡ್ಡ ಮೈದಾನದಲ್ಲಿ ಒಂದಾಗಿದೆ. ಈ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ನಿನ್ನೆ ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಐಸಿಸಿ ಅವಕಾಶ ನೀಡಿತ್ತು. ಇದೀಗ 60 ಸಾವಿರ ಫ್ರೀ-ಸೇಲ್ ಟಿಕೆಟ್ ಕೇವಲ 5 ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿರುವ ಬಗ್ಗೆ ಐಸಿಸಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್
Advertisement
Advertisement
ಭಾರತ ಹಾಗೂ ಪಾಕಿಸ್ತಾನ ನಡುವಿನ 60 ಸಾವಿರ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆದರೂ ಅಫಿಶಿಯಲ್ ಹಾಸ್ಪಿಟಾಲಿಟಿ ಹಾಗೂ ಐಸಿಸಿ ಟ್ರಾವೆಲ್ಸ್ ಮತ್ತು ಟೂರ್ಸ್ ಯೋಜನೆಯಡಿ ಇನ್ನೂ ಕೆಲವು ಟಿಕೆಟ್‍ಗಳು ಲಭ್ಯವಿವೆ. ಈ ಬಗ್ಗೆ ಇ-ಮೇಲ್ ಮೂಲಕ ಟಿಕೆಟ್ ಲಭ್ಯತೆಯ ಮಾಹಿತಿಯನ್ನು ಐಸಿಸಿ ನೀಡುತ್ತದೆ ಎಂದು ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್
Advertisement
8ನೇ ಆವೃತ್ತಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದ 7 ಮೈದಾನದಲ್ಲಿ ನಡೆಯಲಿದ್ದು, ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿ ಟೂರ್ನಿಯ ಎಲ್ಲಾ ಪಂದ್ಯಗಳು ನಡೆಯಲಿದ್ದು, ಟೂರ್ನಿಯ ಫೈನಲ್ ಪಂದ್ಯಾಟ ನವೆಂಬರ್ 13 ರಂದು ನಡೆಯಲಿದೆ.
???????????????? ???????? ???????????? ???????????? ???????????????? !
Tickets are on sale now for the ICC Men's T20 World Cup Australia 2022! ????️
Get your tickets here: https://t.co/CvibedsYAz #T20WorldCup pic.twitter.com/2rzlcnXlxH
— T20 World Cup (@T20WorldCup) February 7, 2022
ಒಟ್ಟು 16 ವಿಶ್ವದ ಬಲಾಢ್ಯ ತಂಡಗಳು ವಿಶ್ವಕಪ್‍ಗಾಗಿ ಸೆಣಸಾಡಲಿದ್ದು, 45 ಪಂದ್ಯಗಳು ನಡೆಯಲಿದೆ. ಗ್ರೂಪ್ A ವಿಭಾಗದಲ್ಲಿ ಇಂಗ್ಲಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಸ್ಥಾನಪಡೆದಿದ್ದರೆ, ಗ್ರೂಪ್ B ವಿಭಾಗದಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲದೇಶ ಸ್ಥಾನ ಪಡೆದುಕೊಂಡಿದೆ.
2021ರ ಟಿ20 ವಿಶ್ವಕಪ್‍ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ, ಇತಿಹಾಸ ಬರೆದಿತ್ತು. ಆ ಬಳಿಕ ಮತ್ತೊಮ್ಮೆ ಉಭಯ ತಂಡಗಳು ಟಿ20 ವಿಶ್ವಕಪ್‍ನಲ್ಲಿ ಎದುರುಬದುರಾಗುತ್ತಿದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.