ನವದೆಹಲಿ: ಹೆಲ್ಮೆಟ್ ಧರಿಸದೇ ರ‍್ಯಾಲಿಯಲ್ಲಿ ಭಾಗವಿಸಿದ್ದ ಬಿಜೆಪಿ ಸಂಸದನಿಗೆ ದೆಹಲಿ ಸಂಚಾರಿ ಪೊಲೀಸರು 20 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ.
ದೆಹಲಿ ಕೆಂಪುಕೋಟೆ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಆಯೋಜಿಸುವ ಹರ್ ಘರ್ ತಿರಂಗ ಬೈಕ್ ರ‍್ಯಾಲಿ ವೇಳೆ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಭಾಗಿ ಆಗಿದ್ದರು. ಈ ವೇಳೆ ಹೆಲ್ಮೆಟ್ ಇಲ್ಲದೇ ಬೈಕ್ ಚಲಿಸಿದ್ದಾರೆ. ಇದನ್ನು ಗಮನಿಸಿದ ದೆಹಲಿ ಸಂಚಾರ ಪೊಲೀಸರು 20,000ರೂ. ದಂಡವನ್ನು ವಿಧಿಸಿದ್ದಾರೆ.
Advertisement
Very Sorry for not wearing helmet today. I will pay the challan @dtptraffic ???? .. clear number plate of vehicle is shown in this photo and location was Red Fort.
आप सब से निवेदन है कि बिना हेल्मेट two wheeler नही चलायें #DriveSafe family and friends need you ???? pic.twitter.com/MrhEbcwsxZ
— Manoj Tiwari ???????? (@ManojTiwariMP) August 3, 2022
Advertisement
ಇದಾದ ಬಳಿಕೆ ಸಂಸದ ಮನೋಜ್ ತಿವಾರಿ ಟ್ವೀಟ್ ಮಾಡಿ ಹೆಲ್ಮೆಟ್ ರಹಿತ ಸಂಚಾರಕ್ಕೆ ಕ್ಷಮೆಯಾಚಿಸಿದ್ದಾರೆ. ಇದರ ಜೊತೆಗೆ ದಂಡವನ್ನು ಪಾವತಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಲೇಷ್ಯಾಗೆ 18 ತೇಜಸ್ ವಿಮಾನ – ಅಮೆರಿಕ ಸೇರಿದಂತೆ 6 ರಾಷ್ಟ್ರಗಳಿಂದ ಖರೀದಿಗೆ ಆಸಕ್ತಿ
Advertisement
ಬಿಜೆಪಿ ಸಂಸದರು ಹೆಲ್ಮೆಟ್‍ವೊಂದೇ ಅಲ್ಲದೇ ಪರವಾನಗಿ, ಮಾಲಿನ್ಯ ನಿಯಂತ್ರಣ ಪತ್ರ ಇಲ್ಲದೇ ಬೈಕ್ ಚಲಾಯಿಸುತ್ತಿದ್ದರಿಂದ ಪೊಲೀಸರು 20 ಸಾವಿರ ದಂಡವನ್ನು ವಿಧಿಸಿದ್ದಾರೆ. ಇದನ್ನೂ ಓದಿ: ನಗರಾಭಿವೃದ್ಧಿ ಕಚೇರಿಗೆ ಅಕ್ರಮವಾಗಿ ನುಗ್ಗಿದವರ ಮೇಲೆ ಕ್ರಮ ತೆಗೆದುಕೊಳ್ತೀವಿ: ಮುನಿರತ್ನ