ನವದೆಹಲಿ: ಭಾರತವು ಮಲೇಷ್ಯಾಕ್ಕೆ 18 ತರಬೇತಿ ʼತೇಜಸ್ʼ ಲಘು ಯುದ್ಧ ವಿಮಾನ (ಎಲ್‌ಸಿಎ) ಮಾರಾಟ ಮಾಡಲು ಮುಂದಾಗಿದೆ.
ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಅಮೆರಿಕ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಕೂಡ ಸಿಂಗಲ್ ಎಂಜಿನ್ ಹೊಂದಿರುವ ಯುದ್ಧ ವಿಮಾನವನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Advertisement
ಕಳೆದ ವರ್ಷ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ 83 ತೇಜಸ್ ವಿಮಾನ ನಿರ್ಮಾಣ ಸಂಬಂಧ 6 ಶತಕೋಟಿ ಡಾಲರ್ ಮೌಲ್ಯದ ಗುತ್ತಿಗೆಯನ್ನು ನೀಡಿತ್ತು. 2023ಕ್ಕೆ ಎಚ್‌ಎಎಲ್ ವಿಮಾನವನ್ನು ವಿತರಿಸಲಿದೆ.
Advertisement
Advertisement
1983ರಲ್ಲಿ ಅನುಮೋದನೆಗೊಂಡ ನಾಲ್ಕು ದಶಕಗಳ ನಂತರ ಈಗ ಎಚ್‌ಎಎಲ್ ಎಲ್‌ಸಿಎ ತೇಜಸ್ ವಿಮಾನವನ್ನು ಮಾರಾಟ ಮಾಡುತ್ತಿದೆ.
Advertisement
ವಿದೇಶಿ ರಕ್ಷಣಾ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಜೆಟ್ ವಿಮಾನಗಳನ್ನು ರಫ್ತು ಮಾಡಲು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿಂದೆ ವಿನ್ಯಾಸ ಮತ್ತು ತೂಕದ ಕಾರಣ ನೀಡಿ ಭಾರತೀಯ ನೌಕಾಪಡೆ ತೇಜಸ್ ವಿಮಾನವನ್ನು ತಿರಸ್ಕರಿಸಿತ್ತು. ಬಳಿಕ ತಾಂತ್ರಿಕತೆ, ಏವಿಯಾನಿಕ್ಸ್‌ಗಳಲ್ಲಿ ಬದಲಾವಣೆ ಮಾಡಿದ್ದು ಈಗ ವಿದೇಶಕ್ಕೆ ಮಾರಾಟ ಮಾಡಲು ಮುಂದಾಗುತ್ತಿರುವುದು ವಿಶೇಷ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ 18 ಜೆಟ್ ಖರೀದಿ ಸಂಬಂಧ ರಾಯಲ್ ಮಲೇಷಿಯನ್ ಏರ್ ಪ್ರಸ್ತಾವನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ರಕ್ಷಣ ಇಲಾಖೆ ಪ್ರತಿಕ್ರಿಯಿಸಿದ್ದು, ತೇಜಸ್‌ನ ವಿಮಾನಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್ ಯಾಕೆ?
ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್, ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಯುಎಸ್‌ಎ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಎಲ್‌ಸಿಎ ಖರೀದಿಸಲು ಆಸಕ್ತಿ ತೋರಿಸಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶವು ಫೈಟರ್ ಜೆಟ್ ತಯಾರಿಸುವ ಕೆಲಸ ಮಾಡುತ್ತಿದೆ ಎಂದ ಅವರು ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಉಲ್ಲೇಖಿಸಿ ಟೈಮ್‌ಲೈನ್ ನೀಡಲು ನಿರಾಕರಿಸಿದರು.
ತನ್ನದೇ ಆದ ಯುದ್ಧ ವಿಮಾನಗಳನ್ನು ನಿರ್ಮಿಸುವ ಭಾರತದ ನಡೆಯನ್ನು ಬೆಂಬಲಿಸುವುದಾಗಿ ಬ್ರಿಟನ್ ಏಪ್ರಿಲ್‌ನಲ್ಲಿ ಹೇಳಿತ್ತು. ಭಾರತದ ವಾಯುಸೇನೆಯಲ್ಲಿ ಪ್ರಸ್ತುತ ರಷ್ಯಾ, ಬ್ರಿಟಿಷ್ ಮತ್ತು ಫ್ರೆಂಚ್ ಯುದ್ಧ ವಿಮಾನಗಳಿವೆ.
ಕಾರ್ಯನಿರ್ವಹಿಸುತ್ತಿರುವಾಗಲೇ ಪತನ ಹೊಂದುತ್ತಿರುವ ಕಾರಣ ʼಹಾರುವ ಶವಪೆಟ್ಟಿಗೆʼ ಎಂದೇ ಕುಖ್ಯಾತಿ ಪಡೆದಿರುವ ರಷ್ಯಾದಿಂದ ಖರೀದಿಸಲಾಗಿರುವ ಎಲ್ಲ ಮಿಗ್ ವಿಮಾನಗಳಿಗೆ 2025ರ ವೇಳೆಗೆ ನಿವೃತ್ತಿ ಹೇಳಲು ವಾಯುಸೇನೆ ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ
#WATCH Defence Minister Rajnath Singh flies in Light Combat Aircraft (LCA) Tejas, in Bengaluru. #Karnataka pic.twitter.com/LTyJvP61bH
— ANI (@ANI) September 19, 2019
ಭಾರತದ ಸಿಂಗಲ್ ಎಂಜಿನ್ ಫೈಟರ್ ಜೆಟ್ ತೇಜಸ್ ಮಲೇಷ್ಯಾದ ಮೊದಲ ಆದ್ಯತೆಯಾಗಿದ್ದು, ಅದು ತನ್ನ ಹಳೆಯ ಮಿಗ್-29 ಅನ್ನು ಬದಲಿಸಲು ಯೋಜಿಸುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಅಧ್ಯಕ್ಷ ಆರ್. ಮಾಧವನ್ ಕಳೆದ ತಿಂಗಳು ತಿಳಿಸಿದ್ದರು.