`ಯೇ ಮಾಯಾ ಚೇಸಾವೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ ಸಮಂತಾ, ಈಗ ಸ್ಟಾರ್ ನಟಿಯಾಗಿ ಸೌತ್ ಸಿನಿಮಾ ಜಗತ್ತನ್ನು ಆಳುತ್ತಿದ್ದಾರೆ. ದೇಶದ್ಯಾದಂತ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಆಪಲ್ ಬ್ಯೂಟಿ ಸಮಂತಾ 35ರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ʻದುಕುಡುʼ, ಈಗ, ಓ ಬೇಬಿ, ಮಹಾ ನಟಿ, ಯು ಟರ್ನ್, ಮಜಿಲಿ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ, ಹಿಂದಿಯ `ದಿ ಫ್ಯಾಮಿಲಿಮೆನ್ 2′ ಸಿರೀಸ್‌ನಲ್ಲಿ ಸಮಂತಾ ನಟನೆಯ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಬಳಿಕ ವಯಕ್ತಿಕ ಜೀವನದಲ್ಲಿ ನಾಗಚೈತನ್ಯ ಜತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಮತ್ತೆ ಸ್ಟ್ರಾಂಗ್ ಆಗಿ ನಿಂತು `ಪುಷ್ಪ’ ಚಿತ್ರಕ್ಕೆ ಹೆಜ್ಜೆ ಹಾಕೋದರ ಮೂಲಕ ಧೂಳೆಬ್ಬಿಸಿದ್ರು. ಸದ್ಯ ಸಮಂತಾ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಮದುವೆ, ವಿಚ್ಛೇಧನದ ಬಳಿಕ ನಟಿಯ ಕೆರಿಯರ್ ಮುಗಿದು ಹೋಯ್ತು ಅಂದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಈ ನಟಿ. ಇದೀಗ ಹಾಲಿವುಡ್, ಬಾಲಿವುಡ್ ಸೇರಿದಂತೆ ಸಾಕಷ್ಟು ಸಿನಿಮಾಗಳು ಸಮಂತಾ ಕೈಯಲ್ಲಿದೆ. ತೆಲುಗಿನ `ಶಾಕುಂತಲಂ’ ಮತ್ತು ವಿಜಯ್ ದೇವರಕೊಂಡ ಜತೆ ಕೂಡ ನಟಿಸುತ್ತಿದ್ದಾರೆ. ಇದೇ ವೇಳೆ `ಶಾಕುಂತಲಂ’ ಚಿತ್ರತಂಡದಿಂದ ಸಮಂತಾ ನ್ಯೂ ಲುಕ್ ರಿವೀಲ್ ಮಾಡುವುದರ ನಟಿಗೆ ವಿಶ್ ಮಾಡಿದ್ದಾರೆ. ಈ ಹಿಂದೆ ಕೂಡ `ಶಾಕುಂತಲಂ’ ಸಮಂತಾ ಫಸ್ಟ್ ಲುಕ್ ರಿಲೀಸ್ ಮಾಡಿ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ
Wishing.. the Ethereal.. “Shakuntala” from #Shaakuntalam our @Samanthaprabhu2 a very Happy Birthday ????@Samanthaprabhu2 @Gunasekhar1@ActorDevMohan #ManiSharma @neelima_guna@GunaaTeamworks @DilRajuProdctns @SVC_official@tipsofficial #MythologyforMilennials#HBDSamantha pic.twitter.com/4QgKwOIjDU
— Sri Venkateswara Creations (@SVC_official) April 28, 2022
ಕಹಿ ಘಟನೆ ಎಲ್ಲಾ ಮರೆತು ಮತ್ತೆ ಸಿನಿಮಾಗಳತ್ತ ಸಮಂತಾ ಮುಖ ಮಾಡಿದ್ದಾರೆ. ಪವರ್‌ಫುಲ್ ಪಾತ್ರಗಳ ಮೂಲಕ ರಂಜಿಸಲು `ಪುಷ್ಪ’ ಬ್ಯೂಟಿ ಸಜ್ಜಾಗಿದ್ದಾರೆ. ಇನ್ನು ನೆಚ್ಚಿಯ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು, ಸೆಲೆಬ್ರೆಟಿ ಸ್ನೇಹಿತರು ಶುಭಹಾರೈಸುತ್ತಿದ್ದಾರೆ.