ಹಿಂದಿ ರಾಷ್ಟ್ರ ಭಾಷೆ. ನೀವು ಒಪ್ಪಿಕೊಳ್ಳದೇ ಇದ್ದರೆ ನಿಮ್ಮ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ ಎಂದು ಕಿಚ್ಚ ಸುದೀಪ್ ಅವರ ಮಾತಿಗೆ ಟ್ವಿಟ್ ಮಾಡಿದ್ದ ಅಜಯ್ ದೇವಗನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಿನ್ನೆಯಷ್ಟೇ ಸ್ಯಾಂಡಲ್ ವುಡ್ ಬಹುತೇಕ ನಟರು ಅಜಯ್ ದೇವಗನ್ ಮಾತನ್ನು ಖಂಡಿಸಿದ್ದರು. ಇಂದು ಅಜಯ್ ದೇವಗನ್ ವಿರುದ್ಧ ಕರಾವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
Advertisement
ಈ ಕುರಿತು ಮಾತನಾಡಿರುವ ಪ್ರವೀಣ್ ಶೆಟ್ಟಿ, ‘ನಾವು ಹಿಂದಿ ಭಾಷಿಗರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅಜಯ್ ದೇವಗನ್ ನಟನೆಯ ಸಿನಿಮಾಗಳನ್ನು ರಿಲೀಸ್ ಮಾಡಲು ಬಿಡುವುದಿಲ್ಲ. ಅವರು ಕನ್ನಡದ ವಿಷಯದಲ್ಲಿ ತಲೆ ಹಾಕುವುದು ಬೇಡ’ ಎಂದಿದ್ದಾರೆ. ಇಂದು ಬೆಂಗಳೂರಿನ ಮೈಸೂರು ವೃತ್ತದಲ್ಲಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ
Advertisement
Advertisement
ನಿನ್ನೆ ನಡೆದ ಟ್ವಿಟ್ ವಾರ್ ನಲ್ಲಿ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಕನ್ನಡ ಪರ ಮಾತನಾಡಿದ್ದ ಸುದೀಪ್ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಜಯ್ ದೇವಗನ್ ಹೇಳಿಕೆ ಖಂಡಿಸಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ಟ್ವಿಟ್ ಮಾಡಿದ್ದರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ
Advertisement
ಕೇವಲ ಸ್ಯಾಂಡಲ್ ವುಡ್ ನಟರು ಮಾತ್ರವಲ್ಲ, ದಕ್ಷಿಣದ ಅನೇಕ ತಾರೆಯರು ಕಿಚ್ಚನ ಬೆನ್ನಿಗೆ ನಿಂತಿದ್ದರು. ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಿಚ್ಚನನ್ನು ಬೆಂಬಲಿಸಿ ಸರಣಿ ಟ್ವಿಟ್ ಮಾಡಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಜೈಕಾರವೇ ಹಾಕಲಾಯಿತು.