‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಸ್ಪರ್ಧಿ ಹನುಮಂತ (Hanumantha) ಅವರು ಯಾವುದೇ ವಿಚಾರ ಇದ್ದರೂ ಅದನ್ನು ನೇರ ಮಾತುಗಳಲ್ಲಿ ಹೇಳುತ್ತಾರೆ. ಹೊರಗೊಂದು ಒಳಗೊಂದು ಎಂಬುದು ಇಲ್ಲ. ಆಪ್ತ ಎನಿಸಿಕೊಂಡವರಿಗೆ ಅವರು ಯಾವಾಗಲೂ ಫೇವರಿಸಂ ಮಾಡಿಲ್ಲ. ಈಗ ಭವ್ಯಾಗೆ ‘ಡವ್ ಮಾಡ್ತೀಯಾ’ ಎಂದು ಹನುಮಂತ ನೇರ ಮಾತುಗಳಲ್ಲಿ ಹೇಳಿದ್ದಾರೆ.

‘ಬಿಗ್ ಬಾಸ್’ ಕೊನೆಯ ವಾರದಲ್ಲಿ ರೆಸಾರ್ಟ್ ಮಾದರಿಯ ಸೆಟ್‌ನ ಹಾಕಲಾಗಿತ್ತು. ಅಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದರ ಜೊತೆಗೆ ಸ್ಪರ್ಧಿಗಳಿಗೆ ಪತ್ರ ಬರೆದು ಅವರ ಬಗೆಗಿನ ಒಳ್ಳೆಯ ಮಾತನ್ನು ಹೇಳಬೇಕಿತ್ತು. ಹನುಮಂತ ಅವರು ಭವ್ಯಾಗೆ ಪತ್ರ ಬರೆದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಿನ್ನ ಆಟ ಸೂಪರ್, ನಿನ್ನ ಮಾತು ಸೂಪರ್, ನಿನ್ನ ನೋಟ ಸೂಪರ್, ನಿನ್ನ ಡ್ಯಾನ್ಸ್ ಸೂಪರ್, ನೀನು ಮಾಡೋ ಡವ್ ಸೂಪರ್. ಆದರೆ, ಸಿಟ್ಟು ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಸಿಸ್ಟರ್ ಎಂದು ಹನುಮಂತ ಬರೆದಿದ್ದಾರೆ. ಇದಕ್ಕೆ ಭವ್ಯಾ ನಗುತ್ತಲೇ ನಾನೇನು ಡವ್ ಮಾಡಿದ್ದೀನಿ ಎಂದು ಕೇಳಿದರು. ಈಗ ಮಾಡ್ತಾ ಇದ್ದೀಯಲ್ಲ ಇದುವೇ ಡವ್ ಎಂದು ಭವ್ಯಾ ಕಾಲೆಳೆದಿದ್ದಾರೆ. ಆಗ ಹನುಮಂತನ ಮಾತಿಗೆ ಭವ್ಯಾಗೆ ಮಾತೇ ಬರಲಿಲ್ಲ. ಹನುಮಂತ ಅವರ ನೇರ ಮಾತಿಗೆ ಸ್ಪರ್ಧಿಗಳು ಭೇಷ್ ಎಂದಿದ್ದಾರೆ.

