ಲಕ್ನೋ: ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿರುವ (Shahjahanpur) ಹನುಮಾನ್ ದೇವಾಲಯವನ್ನು (Hanuman Temple) ರಾಷ್ಟ್ರೀಯ ಹೆದ್ದಾರಿ (National Highway) ನಿರ್ಮಾಣಕ್ಕಾಗಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಆದರೆ ಇದನ್ನು ವಿರೋಧಿಸಿ ಹಿಂದೂ ಸಂಘಟನೆ ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ದೇವಾಲಯವನ್ನು ಸ್ಥಳಾಂತರಿಸಲು ಅಡ್ಡಿಪಡಿಸುತ್ತಿರುವ ದೇವಾಲಯದ ಅರ್ಚಕರು, ಗ್ರಾಮಸ್ಥರು ಸೇರಿದಂತೆ 32 ಜನರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ದೇವಾಲಯದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಲ್ಹಾರ್ ಪೊಲೀಸ್ ಠಾಣೆ ಪ್ರಭಾರಿ ವೀರೇಂದ್ರ ಸಿಂಗ್ ತಿಳಿಸಿದ್ದಾರೆ.
Advertisement
ದೇವಾಲಯವನ್ನು ಪ್ರಸ್ತುತ ಸ್ಥಳದಿಂದ 80 ಮೀ. ದೂರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇದರ ಕೆಲಸ ಸೆಪ್ಟೆಂಬರ್ 17 ರಿಂದ ಪ್ರಾರಂಭಿಸಲಾಗಿದೆ. ಆದರೆ ಬಳಿಕ ಹಿಂದೂ ಸಂಘಟನೆಯ ಸದಸ್ಯರು ಇದನ್ನು ವಿರೋಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ
Advertisement
Advertisement
ಈ ದೇವಾಲಯ ಸುಮಾರು 1 ಶತಮಾನದಷ್ಟು ಹಳೆಯದಾಗಿದೆ. ಇದೀಗ ಹೆದ್ದಾರಿ ವಿಸ್ತರಣೆಗೆ ದೇವಾಲಯ ಅಡ್ಡಿಯಾಗುತ್ತಿದೆಯೆಂದು ಸ್ಥಳಾಂತರಿಸುತ್ತಿದ್ದಾರೆ. ಕಳೆದ 2 ವರ್ಷದ ಹಿಂದೆಯೇ ದೇವಾಲಯವನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗಿತ್ತು. ಆದರೆ ಅದಕ್ಕಾಗಿ ತರಲಾಗಿದ್ದ ಕ್ರೇನ್ ಹಾನಿಗೊಳಗಾಗಿತ್ತು. ಬಳಿಕ ನಮಗೆ ದೇವಾಲಯದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಪುರುಷ ED, CBI ನನ್ನನ್ನು ಮುಟ್ಟುವಂತಿಲ್ಲ – ಸುವೇಂದು ಅಧಿಕಾರಿಗೆ ಇದ್ರಿಸ್ ಅಲಿ ಟಾಂಗ್
Advertisement
ಈ ಕಾಮಗಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಹೆಚ್‌ಎಐ) ಅಡಿಯಲ್ಲಿ ಮಾಡಲಾಗುತ್ತಿದ್ದು, ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕವೇ ಹನುಮಾನ್ ದೇವಾಲಯವನ್ನು ಸ್ಥಳಾಂತರಿಸಲಾಗುತ್ತಿದೆ. ದೇವಾಲಯವನ್ನು ಸಂಪೂರ್ಣ ಗೌರವದಿಂದಲೇ ವರ್ಗಾವಣೆ ಮಾಡುತ್ತಿದ್ದೇವೆ ಎಂದು ಎಂದು ತಿಲ್ಹಾರ್ ಎಸ್‌ಡಿಎಂ ರಾಶಿ ಕೃಷ್ಣ ಹೇಳಿದ್ದಾರೆ.