LatestMain PostNational

ನಾನು ಪುರುಷ ED, CBI ನನ್ನನ್ನು ಮುಟ್ಟುವಂತಿಲ್ಲ – ಸುವೇಂದು ಅಧಿಕಾರಿಗೆ ಇದ್ರಿಸ್ ಅಲಿ ಟಾಂಗ್

ಕೋಲ್ಕತ್ತಾ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸುವೇಂದು ಅಧಿಕಾರಿಯನ್ನು (Suvendu Adhikari) ಮಹಿಳಾ ಪೊಲೀಸರು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ನಾನು ಪುರುಷ, ನನ್ನನ್ನು ಮುಟ್ಟಬೇಡಿ ಎಂದು ಕಿರುಚಾಡಿದ್ದರು. ಇದೀಗ ಇದಕ್ಕೆ ಟಾಂಗ್ ನೀಡಲು ಮುಂದಾಗಿರುವ ಟಿಎಂಸಿ ಎಮ್‍ಎಲ್‍ಎ ಇದ್ರಿಸ್ ಅಲಿ (Idris Ali) ನಾನು ಪುರುಷ ಇಡಿ (ED), ಸಿಬಿಐ (CBI) ನನ್ನನ್ನು ಮುಟ್ಟುವಂತಿಲ್ಲ ಎಂದು ತಮ್ಮ ಕುರ್ತಾದಲ್ಲಿ ಬರೆದುಕೊಂಡು ವ್ಯಂಗ್ಯವಾಡಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಹಲವು ಬಿಜೆಪಿ ನಾಯಕರು ಕೆಲದಿನಗಳ ಹಿಂದೆ ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ಮೆರವಣಿಗೆ ಮೂಲಕ ಕೋಲ್ಕತ್ತಾದ ರಾಜ್ಯ ಕಾರ್ಯಾಲಯ ನಬನ್ನಾಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಮುಂದಾಗಿದ್ದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಈ ವೇಳೆ ಮಹಿಳಾ ಪೊಲೀಸರು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಸುವೇಂದು ಅಧಿಕಾರಿ, ನನ್ನನ್ನು ಮುಟ್ಟಬೇಡಿ, ನೀವು ಮಹಿಳೆಯರು, ಪುರುಷ ಪೊಲೀಸರನ್ನು ಕರೆಯಿರಿ ಎಂದು ಕಿರುಚಾಡಿದ್ದರು. ಇದನ್ನೂ ಓದಿ: 2026ಕ್ಕೆ ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳ!

ಬಳಿಕ ಈ ಬಗ್ಗೆ ಮಹಿಳಾ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂದು ಸುವೇಂದು ಅಧಿಕಾರಿ ಟೀಕಿಸಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಸೀದಿಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾದ RSS ಮುಖ್ಯಸ್ಥ ಮೋಹನ್ ಭಾಗವತ್

ಇದೀಗ ಈ ಬಗ್ಗೆ ಕಿಚಾಯಿಸಿರುವ ಇದ್ರಿಸ್ ಅಲಿ, ಬಂಗಾಳದ ಅಧಿವೇಶನಕ್ಕೆ ಆಗಮಿಸಿದಾಗ ತಾವು ಧರಿಸಿದ್ದ ಕುರ್ತಾದಲ್ಲಿ ನಾನು ಪುರುಷ ಇಡಿ, ಸಿಬಿಐ ನನ್ನನ್ನು ಮುಟ್ಟುವಂತಿಲ್ಲ ಎನ್ನುವಂತಹ ಕೆಲ ಬಿಜೆಪಿ ನಾಯಕರಿದ್ದಾರೆ ಎಂದು ಬರೆದುಕೊಂಡು ವ್ಯಂಗ್ಯವಾಡಿದ್ದಾರೆ.

Live Tv

Leave a Reply

Your email address will not be published.

Back to top button