InternationalLatestLeading NewsMain PostNational

2026ಕ್ಕೆ ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳ!

ನವದೆಹಲಿ: ಭಾರತದಲ್ಲಿ (India) ಕೋಟ್ಯಧಿಪತಿಗಳ (Billionaire) ಸಂಖ್ಯೆ 2026ರ ವೇಳೆಗೆ ಹೆಚ್ಚಾಗಲಿದೆ ಎಂದು ಕ್ರೆಡಿಟ್ ಸ್ಯೂಸ್ಸೆ (Credit Suisse Report)  ವಾರ್ಷಿಕ ಜಾಗತಿಕ ಸಂಪತ್ತು ವರದಿ-2022 ಅಂದಾಜಿಸಿದೆ.

ವರದಿ ಪ್ರಕಾರ, 2021ರಲ್ಲಿ ಭಾರತದಲ್ಲಿ 7.96 ಲಕ್ಷ ಕೋಟ್ಯಧಿಪತಿ (Billionaire) ಗಳಿದ್ದಾರೆ. ಈ ಸಂಖ್ಯೆ 2026ರ ವೇಳೆಗೆ ಶೇ.10 ರಷ್ಟು ಏರಿಕೆಯಾಗಲಿದೆ. 16.32 ಲಕ್ಷ ಮಂದಿ ಕೋಟ್ಯಧಿಪತಿಗಳಾಗಲಿದ್ದಾರೆ. ಆಫ್ರಿಕಾ (Africa) ಶೇ.173, ಬ್ರೆಜಿಲ್ (Brezil) ಶೇ.115 ಇದ್ದು, ನಂತರದ ಸಾಲಿನಲ್ಲಿ ಭಾರತ ಇದೆ ಎಂದು ವರದಿ ಹೇಳಿದೆ. ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಕಾನೂನು ಜಾರಿಯಾಗಿದೆ – ಲಂಚ ತಿಂದರೆ ಅಪರಾಧವಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ: ಸಿದ್ದು

ಪ್ರಸ್ತುತ ವಿಶ್ವದಲ್ಲೇ ಅತಿಹೆಚ್ಚಿನ ಸಂಖ್ಯೆಯ ಕೋಟ್ಯಧಿಪತಿಗಳು ಅಮೆರಿಕದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಚೀನಾ ಇದೆ. ವಿಶ್ವದ ಒಟ್ಟು ಕೋಟ್ಯಧಿಪತಿಗಳ ಪೈಕಿ ಭಾರತದಲ್ಲಿ ಶೇ.1ರಷ್ಟು ಮಂದಿ ಇದ್ದಾರೆ. ಇದನ್ನೂ ಓದಿ: ರವೀಂದರ್ ಗೆ ಮಹಿಳಾ ಅಭಿಮಾನಿಗಳ ಕಾಟ, ಪತಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಮಹಾಲಕ್ಷ್ಮಿ

ಜಾಗತಿಕ ಸಂಪತ್ತು ಅಂದಾಜು 463.6 ಟ್ರಿಲಿಯನ್ (Trillion Economy) ಅಮೆರಿಕನ್ ಡಾಲರ್ (US Dollers) ಇದೆ. 2020ಕ್ಕೆ ಹೋಲಿಸಿದರೆ ಜಾಗತಿಕ ಸಂಪತ್ತು ಶೇ.9.8ರಷ್ಟು ಏರಿಕೆಯಾಗಿದೆ. ಕಳೆದ 21 ವರ್ಷಗಳಲ್ಲಿ ಇದು ದಾಖಲೆಯ ಏರಿಕೆ ಕಂಡಿದೆ. ಅಲ್ಲದೇ 2020ಕ್ಕೆ ಹೋಲಿಸಿದರೆ ಸರಾಸರಿ ಜಾಗತಿಕ ಸಂಪತ್ತಿನ ಬೆಳವಣಿಗೆ 2021ರಲ್ಲಿ ಶೇ.12.7ರಷ್ಟಾಗಿದೆ. ಇದು ಈವರೆಗೂ ದಾಖಲಾದ ಅತಿ ವೇಗದ ಬೆಳವಣಿಗೆಯಾಗಿದೆ. ದೇಶದಲ್ಲಿ 2026ರ ವೇಳೆಗೆ ಇನ್ನೂ 163 ಟ್ರೆಲಿಯನ್‌ಗಳಷ್ಟು ಸಂಪತ್ತು ಹೆಚ್ಚಾಗಲಿದ್ದು, ಇದರಿಂದ ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಹೇಳಲಾಗಿದೆ.

ಇನ್ನೊಂದೆಡೆ, ಸರಾಸರಿ ಸಂಪತ್ತಿನಲ್ಲಿ ಆಸ್ಟ್ರೇಲಿಯನ್ನರು ವಿಶ್ವದ ಶ್ರೀಮಂತ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಬೆಲ್ಜಿಯಂ ಮತ್ತು ನ್ಯೂಜಿಲೆಂಡ್ ಇರುವುದಾಗಿ ವರದಿ ಅಂದಾಜಿಸಿದೆ.

Live Tv

Leave a Reply

Your email address will not be published.

Back to top button