ಬೀದರ್: ಚಿಟಗುಪ್ಪ ತಾಲೂಕಿನ ಬನ್ನಳ್ಳಿ ಗ್ರಾಮದ (Bannalli Village) ಪುರಾತನ ಮಂದಿರಕ್ಕೆ ಹಂಪಿಯ (Hampi) ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (Department of Archaeology) ಅಧಿಕ್ಷಕ ಡಾ. ನಿಹಿಲ್ ದಾಸ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ (Dr Shailendra Beldale) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲ್ಯಾಣ ಕರ್ನಾಟಕ (Kalyana Karnataka) ಭಾಗಗಳಲ್ಲಿ ತುಂಬಾ ಸ್ಮಾರಕಗಳು ಇವೆ. ತಾಲೂಕಿನ ಬನ್ನಳ್ಳಿ ಗ್ರಾಮದ ರಾಮಲಿಂಗೇಶ್ವರ ಮಂದಿರವೂ ಕೂಡಾ ಸಾವಿರಾರು ವರ್ಷಗಳ ಪುರಾತನ ಮಂದಿರವಾಗಿದೆ. ಅದರ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕಾಗಿ ಕ್ಷೇತ್ರದ ಶಾಸಕರು ಆಸಕ್ತಿ ತೋರಿಸಿ ನಮಗೆ ಇಲ್ಲಿಗೆ ಭೇಟಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರು. ಅವರು ಕೂಡಾ ಸ್ಮಾರಕದ ಸಂರಕ್ಷಣೆಗೆ ಸಹಕಾರ ನೀಡುತ್ತೇನೆ ಎಂದಿದ್ದಾರೆ. ಈ ಸಂಬಂಧ ನಮ್ಮ ತಂಡ ಕಾರ್ಯಪ್ರವೃತ್ತವಾಗಿದೆ ಎಂದು ಡಾ. ನಿಹಿಲ್ ದಾಸ್ ಹೇಳಿದರು. ಇದನ್ನೂ ಓದಿ: ಸಾಲು ಸಾಲು ರಜೆ – ಬಸ್ ಟಿಕೆಟ್ ದರ ದುಪ್ಪಟ್ಟು!
Advertisement
Advertisement
ಚಿಟಗುಪ್ಪ ತಾಲ್ಲೂಕಿನ ಬನ್ನಳ್ಳಿ ಗ್ರಾಮದ ರಾಮಲಿಂಗೇಶ್ವರ ಗ್ರಾಮದಲ್ಲಿನ ಶಿಲ್ಪಕಲೆಯ ದೇಗುಲದ ಸಮಗ್ರ ಪ್ರಗತಿಗೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಮ್ಮ ಪುರಾತತ್ವ ಇಲಾಖೆ ವತಿಯಿಂದ ಈ ದೇಗುಲದ ಕುರಿತು ಸಮಗ್ರವಾಗಿ ತಜ್ಞರಿಂದ ಸಂಶೋಧನೆ ನಡೆಸಲಾಗುವುದು. ಇಲ್ಲಿ ಹಳೆಗನ್ನಡ ಲಿಪಿಗಳು ಹಲವು ಸುಂದರ ಶಿಲಾಮೂರ್ತಿಗಳು ಕಂಡು ಬಂದಿದ್ದು, ಈ ಮಂದಿರ ಯಾರಿಂದ ನಿರ್ಮಿಸಲಾಯಿತು? ಮಂದಿರ ನಿರ್ಮಿಸಿದ ಶಿಲ್ಪಾಚಾರ್ಯರು ಯಾರು ಹೀಗೆ ನಾನಾ ವಿಧಗಳಿಂದ ನಮ್ಮ ತಂಡ ಸಂಶೋಧನೆ ನಡೆಸಿ ಇತಿಹಾಸವನ್ನು ಬೆಳಕಿಗೆ ತರಲು ಪ್ರಯತ್ನ ಮಾಡುತ್ತೇವೆ ಎಂದರು.
Advertisement
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರದ ಏಕೈಕ ಪುರಾತನ ಶಿಲ್ಪಕಲಾ ದೇಗುಲ ಇದಾಗಿದ್ದು ಪುರಾತತ್ವ ಇಲಾಖೆಯ ಮೂಲಕ ಆಗಬೇಕಾದ ಪ್ರಗತಿ ಕಾರ್ಯಗಳು ಕೈಗೊಂಡು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.
Advertisement
Web Stories