ರಾಮನಗರ: ಮನೆ ಬೀಗ ಮುರಿದು ಅರ್ಧ ಕೆ.ಜಿ ಚಿನ್ನ ದರೋಡೆ ಮಾಡಿ, ಖದೀಮರು ಪರಾರಿಯಾಗಿರುವ ಘಟನೆ ರಾಮನಗರ (Ramanagar) ಟೌನ್ ವ್ಯಾಪ್ತಿಯ ದ್ಯಾವರಸೇಗೌಡನದೊಡ್ಡಿ ಬಳಿ ನಡೆದಿದೆ.
ಸಾಫ್ಟ್ವೇರ್ ಉದ್ಯೋಗಿ ಲಿಖಿತ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ, ಬೀಗ ಮುರಿದು ಚಿನ್ನ ದೋಚಿದ್ದಾರೆ. ಸಂಜೆ ಮನೆಗೆ ಬಂದ ಲಿಖಿತ್ ಬೀಗ ಮುರಿದಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಬಳಿಕ ಬೆಡ್ ರೂಂನ ಕಬೋರ್ಡ್ ಅನ್ನು ನೋಡಿದ್ದಾಗ ಚಿನ್ನಾಭರಣ ಕಳ್ಳತನ ಆಗಿರುವುದು ಗೊತ್ತಾಗಿದೆ. ಇದನ್ನೂ ಓದಿ: ಬೆರಳ ತುದಿಯಲ್ಲಿ ಕೃಷಿ ಮಾಹಿತಿ – ರೈತಸ್ನೇಹಿ ʼಭಾರತ್ ವಿಸ್ತಾರ್ʼ ಆಪ್ ವಿಶೇಷತೆ ಏನು? ಬಳಕೆ ಹೇಗೆ?
ಖದೀಮರು ಕಳ್ಳತನ ಮಾಡಿ, ಸಿಸಿಟಿವಿ ಡಿವಿಆರ್ ಕೂಡ ಹೊತ್ತುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ಖದೀಮರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಅಕ್ಕಪಕ್ಕದ ಮನೆ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.

