– ಮಕ್ಕಳಲ್ಲಿ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ.. ಆತಂಕ ಬೇಡ: ಆರೋಗ್ಯ ಇಲಾಖೆ ಆಯುಕ್ತರ ಸ್ಪಷ್ಟನೆ

ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು, ಆತಂಕ ಮೂಡಿಸಿದೆ.
ಸದ್ಯಕ್ಕೆ ಹೈಸ್ಕೂಲ್ ಮಾತ್ರ ಬಂದ್ ಮಾಡಲಾಗಿದೆ. ಮಕ್ಕಳಿಗೆ ಆನ್‌ಲೈನ್ ಮೂಲಕ ಕ್ಲಾಸ್ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಪ್ರೈಮರಿ ಶಾಲೆ ಸದ್ಯ ಓಪನ್ ಆಗಿದೆ. ಹಂತ ಹಂತವಾಗಿ ಶಾಲೆ ರಿ-ಓಪನ್ ಆಗಲಿದೆ. ಒಟ್ಟು 500 ಮಕ್ಕಳಿಗೆ ಶೀತ ಜ್ವರ ಬಂದಿತ್ತು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಷನ್ ಮಾಡಿದ್ದೇವೆ. ಆತಂಕ ಬೇಡ.. ಮಕ್ಕಳಿಗೆ ಯಾರಿಗೂ H1N1 ಕಾಣಿಸಿಕೊಂಡಿಲ್ಲ. ಸುತ್ತಮುತ್ತ ಬೀದಿಬದಿ ಆಹಾರ ತಯಾರಿ ಮಾಡುತ್ತಾರೆ. ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಹೀಗಾಗಿ ನಾವು ದೂರು ಕೊಟ್ಟಿದ್ದೇವೆ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಕೋಲಾರ ಡಿಸಿ ಕಚೇರಿ ಎದುರು ಬಿಜೆಪಿ ಅನಿರ್ದಿಷ್ಟಾವಧಿ ಪ್ರತಿಭಟನೆ – ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಹೆಚ್1ಎನ್1 ಕಾಣಿಸಿಕೊಂಡಿಲ್ಲ. ಇಬ್ಬರು ಶಿಕ್ಷಕರಲ್ಲಿ ಎಚ್1ಎನ್1 ಕಾಣಿಸಿಕೊಂಡಿತ್ತು. ಮಕ್ಕಳಿಗೆ ಟೆಸ್ಟ್ ಮಾಡಿಸಿ ಅಂತಾ ಪೋಷಕರಿಗೆ ಶಾಲೆ ಆಡಳಿತ ಮಂಡಳಿ ಸೂಚನೆ ನೀಡಿದೆ. 2000 ಮಕ್ಕಳಿಗೆ ಟೆಸ್ಟ್ ಆಗಿದ್ದು, ಯಾರಿಗೂ ಹೆಚ್1ಎನ್1 ಇಲ್ಲ. ನೆಗಡಿ, ಕೆಮ್ಮು ಮತ್ತು ಜ್ವರ ಇದೆ. ಆದರೆ ಎಚ್1ಎನ್1 ಇಲ್ಲ. ಆರೋಗ್ಯ ಹಿತದೃಷ್ಟಿಯಿಂದ ಮೂರು ದಿನ ಶಾಲೆ ಕ್ಲೋಸ್ ಮಾಡಲಾಗಿತ್ತು. ಸದ್ಯ ಶಾಲೆ ಕ್ಲೋಸ್ ಮಾಡಿಲ್ಲ. ಶಾಲೆ ನಡೆಯುತ್ತಾ ಇದೆ. ಕಳೆದ ವಾರ ಮಕ್ಕಳಲ್ಲಿ ಅನಾರೋಗ್ಯ ಕಂಡು ಬಂದಿತ್ತು. ಕಳೆದ ವಾರ ಮೂರು ದಿನ ಶಾಲೆ ಬಂದ್ ಮಾಡಲಾಗಿತ್ತು. ಈಗ ಮಕ್ಕಳು ರಿಕವರ್ ಆಗಿದ್ದಾರೆ. ಫ್ಲೂ ಇರುವ ಮಕ್ಕಳನ್ನು ಶಾಲೆಗೆ ಬರಬೇಡಿ ಶಾಲಾ ಅಡಳಿತ ಮಂಡಳಿ ಸೂಚನೆ ನೀಡಿದೆ. ಸದ್ಯ ಶಾಲೆ ಎಂದಿನAತೆ ಕಾರ್ಯಾಚರಣೆ ಮಾಡ್ತಿದೆ. ಶಾಲಾ ಆವರಣದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಅಂತ ಪಾಲಿಕೆಗೆ ಆಡಳಿತ ಮಂಡಳಿ ಆಗ್ರಹ ಮಾಡಿದೆ.
ಆರೋಗ್ಯ ಇಲಾಖೆ ಆಯುಕ್ತ ಗುರುದತ್ ಹೆಗ್ಡೆ ಮಾತನಾಡಿ, ಮಕ್ಕಳಿಗೆ ಹೆಚ್1ಎನ್1 ಅನ್ನೋದು ಸುಳ್ಳು. ಇದು ಸುಳ್ಳು ಮಾಹಿತಿ. ಯಾರೂ ಇದನ್ನ ಸ್ಪ್ರೆಡ್ ಮಾಡಬೇಡಿ. ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 ಕಾಣಿಸಿಕೊಂಡಿದೆ. ಮಕ್ಕಳಿಗೆ ಕಾಣಿಸಿಕೊಂಡಿಲ್ಲ. ಪ್ಯಾನಿಕ್ ಆಗಿ ಮಕ್ಕಳು ಶಾಲೆಗೆ ಹೋಗಿಲ್ಲ. ಅಷ್ಟೇ ಯಾರು ಆತಂಕ ಪಡುವಂತಿಲ್ಲ. ಸಾರ್ವಜನಿಕವಾಗಿ ಪ್ಯಾನಿಕ್ ಆಗುತ್ತೆ ಯಾರು ಈ ಥರ ಸುದ್ದಿ ಮಾಡಬೇಡಿ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ಯಾನಿಕ್ ಆಗೋ ರೀತಿ ಮಾಡಬಾರದು. ಈ ಥರ ವಿಚಾರ ನಮ್ಮ ಗಮನಕ್ಕೆ ತಂದು ಸುದ್ದಿ ಮಾಡಿ. ಇದು ಸುಳ್ಳು ದಯಮಾಡಿ ಯಾರೂ ಆತಂಕ ಪಡಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ – ಪರಿಷತ್‌ನಲ್ಲಿ ಖಂಡನಾ ನಿರ್ಣಯ ಅಂಗೀಕಾರ
