ಮಣಿಪುರ: ಬೂದಿ ಮುಚ್ಚಿದ ಕೆಂಡದಂತಿರುವ ಮಣಿಪುರದಲ್ಲಿ (Manipur) ಮತ್ತೆ ಸೇನಾಪಡೆ ಮತ್ತು ದಂಗೆಕೋರರ ನಡುವೆ ಸಂಘರ್ಷ ನಡೆದಿದೆ. ರಾಜ್ಯದ ಮೋರೆಯಲ್ಲಿ ಪರಸ್ಪರರ ನಡುವೆ ಗುಂಡಿನ ಚಕಮಕಿಯಾಗಿದೆ.
ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮಣಿಪುರದ ಮೊರೆಹ್ ಪಟ್ಟಣದಲ್ಲಿ ಭಾನುವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್ ಟ್ರೆಂಡ್
ಹಿಲ್ಸ್ ಮೂಲದ ದಂಗೆಕೋರರು ರಾಜ್ಯ ಪೊಲೀಸ್ ಪಡೆಗಳ ಮೇಲೆ ದಾಳಿ ಮಾಡಿದ್ದಾರೆ. ಅದಕ್ಕೆ ಪ್ರತಿಕಾರವಾಗಿ ಸೇನಾಪಡೆ ಕೂಡ ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಟೆಂಗ್ನೌಪಾಲ್ ಜಿಲ್ಲೆಯ ಗಡಿ ಪಟ್ಟಣವು ಜನವರಿ 2 ರಂದು ಭಾರೀ ಗುಂಡಿನ ಚಕಮಕಿಯನ್ನು ಕಂಡಿತ್ತು. ಇದರಲ್ಲಿ ಬಿಎಸ್ಎಫ್ ಜವಾನ್ ಸೇರಿದಂತೆ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಉತ್ತಮ ಚಿಕಿತ್ಸೆಗಾಗಿ ಅವರನ್ನು ವಿಮಾನದಲ್ಲಿ ಇಂಫಾಲ್‌ಗೆ ಕರೆದೊಯ್ಯಲಾಯಿತು. ಅದಕ್ಕೂ ಮೊದಲು, ಡಿಸೆಂಬರ್ 30 ರಿಂದ ಪಟ್ಟಣವು ಇದೇ ರೀತಿಯ ಗುಂಡಿನ ಚಕಮಕಿ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ- ತಯಾರಾಗುತ್ತೆ 7 ಸಾವಿರ ಕೆ.ಜಿಯ ರಾಮ ಹಲ್ವಾ