Connect with us

Latest

ಗುಜರಾತ್ ವಿಧಾನಸಭಾ ಚುನಾವಣೆ – ಇಂದು ಮೊದಲ ಹಂತದ ಮತದಾನ

Published

on

ಅಹಮದಾಬಾದ್: ಗುಜರಾತ್ ವಿಧಾನ ಸಭಾ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತದಾನ ಶುರುವಾಗಿದೆ.

ಒಟ್ಟು 182 ಕ್ಷೇತ್ರಗಳಲ್ಲಿ ದಕ್ಷಿಣ ಗುಜರಾತ್, ಕಚ್ ಹಾಗೂ ಸೌರಾಷ್ಟ್ರದಲ್ಲಿ 89 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ 93 ಸ್ಥಾನಗಳಿಗೆ ಡಿಸೆಂಬರ್ 14ರಂದು ಮತದಾನ ನಡೆಯಲಿದೆ. ಡಿಸೆಂಬರ್ 18 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಗುಜರಾತ್ ನಲ್ಲಿ ಮೋದಿ ಸೋತರೆ ಉದ್ಯಮಗಳ ಮೇಲೆ ಆಗೋ ಪರಿಣಾಮಗಳೇನು?

ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ದಾಖಲೆ ಸಂಖ್ಯೆಯಲ್ಲಿ ಜನರು ಬಂದು ಮತದಾನದಲ್ಲಿ ಭಾಗವಹಿಸಬೇಕು. ಅದರಲ್ಲೂ ಯುವ ಜನಾಂಗ ತಮ್ಮ ಮತದಾನದ ಹಕ್ಕು ಚಲಾಯಿಸಬೇಕೆಂದು ಕೇಳುತ್ತೇನೆ ಎಂದಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಈ ಹಬ್ಬವನ್ನು ಯಶಸ್ವಿಗೊಳಿಸುವಂತೆ ಗುಜರಾತ್ ಜನತೆಗೆ ಕೇಳಿಕೊಳ್ಳುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಿಎಂ ವಿಜಯ್ ರೂಪಾನಿ ರಾಜ್‍ಕೋಟ್‍ನಲ್ಲಿ ಮತದಾನ ಮಾಡಿದ್ದಾರೆ. ಪಶ್ಚಿಮ ರಾಜ್‍ಕೋಟ್‍ನಿಂದ ಕಾಂಗ್ರೆಸ್‍ನ ಇಂದ್ರಾಣಿಲ್ ರಾಜ್ಯಗುರು ವಿರುದ್ಧ ವಿಜಯ್ ರೂಪಾನಿ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಗುಜರಾತ್‍ನಲ್ಲಿ ಕಮಲ ಅರಳೋದು ಖಚಿತ! ಯಾವ ಸಮೀಕ್ಷೆ ಏನು ಹೇಳಿದೆ?

ಇದನ್ನೂ ಓದಿ: ಸಮೀಕ್ಷೆಗಳು ಏನೇ ಹೇಳಲಿ ಗುಜರಾತ್‍ನಲ್ಲಿ ಗೆಲ್ಲೋದು ನಾವೇ: ಕೈ ಆತ್ಮವಿಶ್ವಾಸಕ್ಕೆ ಕಾರಣ ಏನು?

ಮೋದಿ ತವರಿನಲ್ಲಿ 22 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಚುನಾವನೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವ್ಯಾಪಕ ಪ್ರಚಾರ ನಡೆಸಿದೆ. ಇದರಿಂದ ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.

Click to comment

Leave a Reply

Your email address will not be published. Required fields are marked *