ಗಾಂಧಿನಗರ: ಕಳೆದ ಎರಡು ತಿಂಗಳ ಹಿಂದೆ ಚಿಕಿತ್ಸೆಗೆಂದು ಬಂದಿದ್ದ ಮಹಿಳಾ ರೋಗಿಗೆ ಮತ್ತು ಬರುವ ಇಂಜೆಕ್ಷನ್ ನೀಡಿ ಆಸ್ಪತ್ರೆಯಲ್ಲಿಯೇ ಅತ್ಯಾಚಾರಗೈದಿದ್ದ ವಡೋದರ ಜಿಲ್ಲೆಯ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕಿತ್ಸೆಗೆಂದು ಬಂದ ಮಹಿಳೆಯ ಮೇಲೆ ವೈದ್ಯ ಪ್ರತೀಕ್ ಜೋಷಿ ಅತ್ಯಾಚಾರ ನಡೆಸಿದ್ದ. ಈ ಕುರಿತಂತೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ವೈದ್ಯ ಡಾ. ಪ್ರತೀಕ್ ಜೋಷಿ ತನಗೆ ಮತ್ತು ಬರುವ ಮದ್ದು ನೀಡಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ ಪೆಕ್ಟರ್ ಜೆಕೆ ಪಟೇಲ್ ಆಸ್ಪತ್ರೆಯ ವೈದ್ಯ ಡಾ. ಪ್ರತೀಕ್ ಜೋಷಿ ಯನ್ನು ಜೂನ್ 11 ರಂದು ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ 376(ರೇಪ್), 328(ಅಪರಾಧಕ್ಕೆ ವಿಷ ಮತ್ತಿತರ ವಸ್ತುಗಳ ಬಳಕೆ) ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
Advertisement
ಅಲ್ಲದೇ ಈ ಕೇಸಿಗೆ ಸಂಬಂಧಪಟ್ಟಂತೆ ವೈದ್ಯ ಅತ್ಯಾಚಾರ ಮಾಡುತ್ತಿರುವುದನ್ನು ಚಿತ್ರೀಕರಣ ಮಾಡಿದ ಆರೋಪದ ಮೇಲೆ ಆಸ್ಪತ್ರೆಯ ಕಂಪೌಂಡರ್ ದಿಲಿಪ್ ಗೊಹಿಲ್ ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈತ ವೀಡಿಯೊ ತೋರಿಸಿ ಸಂತ್ರಸ್ತ ಮಹಿಳೆಯನ್ನು ವೈದ್ಯರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.
Advertisement
ಆದರೆ ಆರೋಪಿ ಪ್ರತೀಕ್ ಜೋಷಿ ಆಸ್ಪತ್ರೆಯ ಕಂಪೌಂಡರ್ ಹೋಹಿಲ್ ಸೇರಿದಂತೆ ಮಹೇದ್ರ ಗೋಹಿಲ್ ಹಾಗೂ ವಿಕ್ರಮ್ ಗೋಹಿಲ್ ಎಂಬುವರು ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ ಮೂವರೂ ನನ್ನನ್ನು ಫೆಬ್ರುವರು 22 ರಂದು ಅಪಹರಣ ಮಾಡಿ 50 ಲಕ್ಷ ರೂ ಗೆ ಬೇಡಿಕೆ ಇಟ್ಟಿದ್ದರು ಎಂದು ದೂರು ದಾಖಲಿಸಿದ್ದಾರೆ.
Advertisement
ಮೂವರೂ ಆರೋಪಿಗನ್ನು ಬಂಧಿಸಲಾಗಿದ್ದು ವೈದ್ಯ ಮಾಡಿರುವ ಆರೋಪ ಕುರಿತಂತೆ ಮೂವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.