ಗಾಂಧೀನಗರ: ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಆರೋಪದಡಿ 28 ವರ್ಷದ ವ್ಯಕ್ತಿ ಮೇಲೆ ಗುಜರಾತ್ ಪೊಲೀಸರು ದೂರು ದಾಖಲಿಸಿದ್ದಾರೆ.
ಗುಜರಾತ್‍ನ ಆನಂದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಮಹಿಳೆ ಪೊಲೀಸರಿಗೆ ದೂರು ನೀಡಿದ ಬಳಿಕ ವಿಷಯ ಬೆಳಕಿಗೆ ಬಂದಿದೆ. ಮಹಿಸಾಗರ್ ಜಿಲ್ಲೆಯ ದೇಬಾರ್ ಗ್ರಾಮದ ವ್ಯಕ್ತಿ 2019ರ ನವೆಂಬರ್‌ನಲ್ಲಿ ಆನಂದ್ ಜಿಲ್ಲೆಯ ಉಮ್ರೆತ್ ತಾಲೂಕಿನ 27 ವರ್ಷದ ಮಹಿಳೆಯನ್ನು ವಿವಾಹವಾಗಿದ್ದನು. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್
Advertisement
Advertisement
ಗಂಡ, ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಜುಲೈನಲ್ಲಿ ಮಹಿಳೆಗೆ ತಲಾಖ್ ನೀಡುವಂತೆ ಹೇಳಿ ಆಕೆಯನ್ನು ಗಂಡನ ಮನೆಯಿಂದ ಹೊರಗೆ ಹಾಕಲಾಗಿದೆ. ಬಳಿಕ ಮಹಿಳೆ ತನ್ನ ಪೋಷಕರ ಮನೆಗೆ ಹಿಂದಿರುಗಿ ವಾಸಿಸುತ್ತಿದ್ದಳು. ಆದರೆ ಈ ವೇಳೆ ಮಹಿಳೆಗೆ ತ್ರಿವಳಿ ತಲಾಖ್ ವಿರುದ್ಧ ಜಾರಿಯಾಗಿರುವ ಕಾನೂನಿನ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಆಗ ದೂರು ನೀಡಿರಲಿಲ್ಲ.
Advertisement
Advertisement
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತಿಯ ಚಟುವಟಿಕೆಯನ್ನು ಪರಿಶೀಲಿಸಲು ಇನ್‍ಸ್ಟಾಗ್ರಾಮ್‍ನಲ್ಲಿ ಫೇಕ್ ಪ್ರೊಫೈಲ್ ಕ್ರಿಯೆಟ್ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಈ ಪ್ರೊಫೈಲ್ ಹಿಂದೆ ತನ್ನ ಪತ್ನಿ ಇದ್ದಾಳೆ ಎಂಬುವುದನ್ನು ತಿಳಿದು ವ್ಯಕ್ತಿ ಮತ್ತೊಮ್ಮೆ ತ್ರಿವಳಿ ತಲಾಖ್ ಉಚ್ಚರಿಸಿದ್ದಾನೆ. ಇದನ್ನೂ ಓದಿ: ಹೂ ಕಟ್ಟುತ್ತಿದ್ದ ಯುವತಿ ಈಗ ಪಿಎಸ್‍ಐ..!
ನಂತರ ಈ ಕುರಿತಂತೆ ಮಹಿಳೆ ಕುಟುಂಬಕ್ಕೆ ಮಾಹಿತಿ ನೀಡಿ, ದೂರು ದಾಖಲಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದಾಗಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ. ಇದೀಗ ಈ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.