ಬೆಂಗಳೂರು: ಐಪಿಎಸ್ ರವಿ ಚೆನ್ನಣ್ಣವರ್ ವರ್ಗಾವಣೆ ಆದೇಶಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಈ ಮೂಲಕ ಒಂದೇ ದಿನಕ್ಕೆ ಸರ್ಕಾರ ತನ್ನ ಆದೇಶವನ್ನು ತಡೆಹಿಡಿದಿದೆ.
ಎರಡು ದಿನಗಳ ಹಿಂದೆ ರವಿ ಡಿ.ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸಿಐಡಿ ಎಸ್‍ಪಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾಯಿಸಲಾಗಿತ್ತು. ಆದರೆ ಇದೀಗ ಸರ್ಕಾರ ಮುಂದಿನ ಆದೇಶದವರೆಗೆ ತಡೆಹಿಡಿದಿದೆ.
Advertisement
Advertisement
ಕೆಲ ದಿನಗಳಿಂದ ರವಿ ಡಿ.ಚನ್ನಣ್ಣನವರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಈ ಸಂಬಂಧ ಪರ-ವಿರೋಧ ಚರ್ಚೆಗಳೂ ನಡೆಯುತ್ತಿವೆ. ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಪ್ರಸಾರವಾಗದಂತೆ ಕ್ರಮವಹಿಸಲು ಚನ್ನಣ್ಣನವರ್ ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರು. ಇದರ ಮಧ್ಯೆಯೇ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
Advertisement
Advertisement
ಸಿಐಡಿಯಿಂದ ಭೀಮಾಶಂಕರ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ, ಎಸಿಬಿಯಿಂದ ಅಬ್ದುಲ್ ಅಹದ್‍ರನ್ನು ಕೆಎಸ್‍ಆರ್‍ಟಿಸಿ ವಿಜಿಲೆನ್ಸ್, ಕಾರಾಗೃಹ ಇಲಾಖೆ ಎಸ್‍ಪಿ ಟಿ.ಪಿ.ಶಿವಕುಮಾರ್ರನ್ನು ಚಾಮರಾಜನಗರ ಎಸ್‍ಪಿ, ಡೆಕ್ಕ ಕಿಶೋರ್ ಬಾಬುರನ್ನು ಬೀದರ್ ಎಸ್‍ಪಿ ಹಾಗೂ ಅರುಣಂಗ್ಯು ಗಿರಿ ಅವರನ್ನು ಕೊಪ್ಪಳ ಎಸ್‍ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.