ಗಾಂಧಿನಗರ: ಟಾಯ್ಲೆಟ್ ರೂಂನಲ್ಲಿ ಕುಳಿತು ನ್ಯಾಯಾಲಯದ ವರ್ಚುಯಲ್ ಆಗಿ ಲೈವ್ ಸ್ಟ್ರೀಮಿಂಗ್‌ನಲ್ಲಿ ಹಾಜರಾಗಿದ್ದ ವ್ಯಕ್ತಿಗೆ 1 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಗುಜರಾತ್‌ನಲ್ಲಿ (Gujarat) ನಡೆದಿದೆ.
ಜೂನ್ 20ರಂದು ಸಮಾದ್ ಅಬ್ದುಲ್ ರೆಹಮನ್ ಶಾ ಎಂಬ ವ್ಯಕ್ತಿ ಟಾಯ್ಲೆಟ್‌ನಲ್ಲಿ ಕುಳಿತು ಸುಮಾರು 74 ನಿಮಿಷಗಳ ಕಾಲ ನ್ಯಾಯಾಲಯದ ವರ್ಚುಯಲ್ ಹಿಯರಿಂಗ್‌ಗೆ ಹಾಜರಾಗಿದ್ದಾನೆ. ನ್ಯಾಯಾಲಯಕ್ಕೆ ದುರ್ವತನೆ ತೋರಿದ್ದಕ್ಕೆ ಗುಜರಾತ್ ಹೈಕೋರ್ಟ್ (High Court) ಅಬ್ದುಲ್ ರೆಹಮನ್‌ಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶ ವಿಧಿಸಿದೆ. ಇದನ್ನೂ ಓದಿ: ಮತ್ತೆ ಸ್ಮಾರ್ಟ್ ಮೀಟರ್ ಹಗರಣ ಕೆದಕಿದ ಬಿಜೆಪಿ – ಸಚಿವ ಜಾರ್ಜ್ ವಿರುದ್ಧ ಖಾಸಗಿ ದೂರು
ನ್ಯಾಯಮೂರ್ತಿ ನಿರ್ಜರ್.ಎಸ್ ದೇಸಾಯಿ ಅವರ ಪೀಠ ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ಸಮಾದ್ ಅಬ್ದುಲ್ ರೆಹಮನ್ ಶಾ ದುರ್ವತನೆ ತೋರಿದ್ದಾರೆ. ಈ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಈ ಕುರಿತು ಕೋರ್ಟ್ ನ್ಯಾಯಾಂಗ ನಿಂದನೆಯ ಸುಮೋಟೋ ಕೇಸ್ ದಾಖಲಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!
ಕೇಸ್ ದಾಖಲು ಆದ ಬಳಿಕ ಆರೋಪಿಗೆ ತನ್ನ ತಪ್ಪಿನ ಅರಿವಾಗಿದ್ದು, ನ್ಯಾಯಾಲಯದ ಮುಂದೆ ಕ್ಷಮೆ ಕೇಳಿದ್ದಾನೆ.ನ್ಯಾಯಲಯಕ್ಕೆ ದುರ್ವರ್ತನೆ ತೋರಿದ್ದ ಅಬ್ದುಲ್ ರೆಹಮನ್ ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ.