ಗಾಂಧಿನಗರ: ಒಬ್ಬರನ್ನೊಬ್ಬರು ಪ್ರೀತಿಸುವ ಜೋಡಿಗಳು ತಮ್ಮ ಪ್ರೀತಿಯನ್ನು ಸಾಬೀತು ಪಡಿಸಲು ಏನೆಲ್ಲಾ ಕಸರತ್ತು ಮಾಡಲ್ಲ? ಇದೀಗ ಗುಜರಾತ್ ಮೂಲದ ಉದ್ಯಮಿಯೊಬ್ಬ ತನ್ನ ಗೆಳತಿಗೆ ಬೇಕೆಂದಾಗ ಕೈಗೂ ಎಟುಕದ ಉಡುಗೊರೆ ನೀಡಿ ಭಾರೀ ಸುದ್ದಿಯಾಗಿದ್ದಾರೆ.
ಗುಜರಾತ್‌ನ ವಡೋದರಾ ಮೂಲದ ಉದ್ಯಮಿ ಮಯೂರ್ ಪಟೇಲ್ ತನ್ನನ್ನು ಮದುವೆಯಾಗಲಿರುವ ಹುಡುಗಿಗೆ ಚಂದ್ರನಲ್ಲಿನ 1 ಎಕರೆ ಜಾಗವನ್ನು ಉಡುಗೊರೆ ನೀಡಿ ಹುಬ್ಬೇರಿಸುವಂತೆ ಮಾಡಿದ್ದಾನೆ.
ಹಿಂದಿನಿಂದಲೂ ಪ್ರೇಮಿಗಳು ರಾತ್ರಿ ಹೊತ್ತು ಆಕಾಶದಲ್ಲಿ ಕಾಣಿಸಿಕೊಳ್ಳುವ ಚಂದ್ರ-ನಕ್ಷತ್ರಗಳನ್ನು ಮುಟ್ಟುವ, ಅದನ್ನು ಹಿಡಿದು ತರುವಂತಹ ಮಕ್ಕಳಂತೆ ಕನಸು ಕಾಣುತ್ತಾರೆ. ಆದರೆ ಈ ಉದ್ಯಮಿ ತನ್ನ ಗೆಳತಿಗೆ ಚಂದ್ರನಲ್ಲಿನ ಜಾಗವನ್ನೇ ಬರೆದುಕೊಟ್ಟು ಜನರಿಗೆ ಅಚ್ಚರಿ ಮೂಡಿಸಿದ್ದಾನೆ. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಡೌನ್ಲೋಡಿಂಗ್ ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆಗೆ ಕನ್ನ
ಭೂಮಿಯನ್ನು ಹೊರತುಪಡಿಸಿ ಬಾಹ್ಯ ಗ್ರಹಗಳಲ್ಲಿ ಒಡೆತನವನ್ನು ಸಾಧಿಸುವುದು ನಿಷೇಧಿಸಲಾಗಿದೆ. ದಿ ಔಟರ್ ಸ್ಪೇಸ್ ಟ್ರೀಟಿ ಆಫ್ 1967 ಎಂಬ ಅಂತಾರಾಷ್ಟ್ರೀಯ ಒಪ್ಪಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಯಾವುದೇ ಆಕಾಶಕಾಯದಲ್ಲಿ ಹಕ್ಕು ಪಡೆಯುವುದನ್ನು ನಿಷೇಧಿಸಿದೆ. ಗುಜರಾತ್‌ನ ಉದ್ಯಮಿ ತನ್ನ ಗೆಳತಿಗೆ ಬರೆದುಕೊಟ್ಟಿರುವ ಚಂದ್ರನ ಮೇಲಿನ ಆಸ್ತಿಯನ್ನು ಕೇವಲ ಡಿಜಿಟಲ್ ರೂಪದ ಆಸ್ತಿ ಎಂದು ಮಾತ್ರವೇ ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: 2023ರಲ್ಲಿ ಬರಲಿದೆ ಭಾರತದ ಮೊದಲ RRTS ರೈಲು
ಉದ್ಯಮಿ ಮಯೂರ್ ಪಟೇಲ್ ತನ್ನ ಗೆಳತಿ ಹೇಮಾಲಿಯೊಂದಿಗೆ ಫೆಬ್ರವರಿ 27ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2 ವರ್ಷ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರವೇ ಹಸೆಮಣೆಏರಲಿದ್ದಾರೆ.