ನವದೆಹಲಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾದಾಗಿನಿಂದ ದೇಶಾದ್ಯಂತ ದೊಡ್ಡಮಟ್ಟದ ಸಂಚಲನ ಮೂಡಿಸಿದೆ. 3 ದಶಕಗಳ ಹಿಂದೆ ಕಾಶ್ಮೀರಿ ಪಂಡಿತರು ಅನುಭವಿಸಿದ ಹಿಂಸಾಚಾರ ಹಾಗೂ ವಲಸೆಯ ನಿಜ ಕಥೆಯಾದಾರಿತ ಸಿನಿಮಾಗೆ ಜನಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಸರ್ಕಾರವೂ ಈ ಸಿನಿಮಾವನ್ನು ಜನರಿಗೆ ತೋರಿಸುವ ಸಲುವಾಗಿ ಟ್ಯಾಕ್ಸ್ ರಹಿತ ಟಿಕೆಟ್ ಒದಗಿಸಿದೆ. ಇದೀಗ ವಾಟ್ಸಪ್‌ನಾದ್ಯಂತ ದಿ ಕಾಶ್ಮೀರದ ಫೈಲ್ಸ್ ಸಿನಿಮಾದ ಡೌನ್ಲೋಡಿಂಗ್ ಲಿಂಕ್‌ಗಳು ಶೇರ್ ಆಗುತ್ತಿದ್ದು, ಈ ಲಿಂಕ್‌ಗಳನ್ನು ವಂಚನೆಗಾಗಿ ಕಿಡಿಗೇಡಿಗಳು ಹಂಚಿದ್ದಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ
Advertisement
Advertisement
ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ಉತ್ತಮ ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಲು ಈ ಲೀಕ್ ಅನ್ನು ಕ್ಲಿಕ್ ಮಾಡಿ ಎಂಬ ಸಂದೇಶದೊಂದಿಗೆ ಶೇರ್ ಆಗುತ್ತಿದೆ. ಲಿಂಕ್ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿದ ವಾಟ್ಸಪ್ ಬಳಕೆದಾರರು ಬಳಿಕ ತಮ್ಮ ಬ್ಯಾಂಕ್ ಖಾತೆಗಳಿಂದ ಹಣವನ್ನು ಕಳೆದುಕೊಂಡಿರುವುದಾಗಿ ಹಲವೆಡೆ ವರದಿಯಾಗಿದೆ.
Advertisement
ವಾಟ್ಸಪ್ ಬಳಕೆದಾರರು ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಹ್ಯಾಕರ್‌ಗಳು ಈ ಲಿಂಕ್‌ಗಳ ಮುಖಾಂತರ ಜನರ ಗೌಪ್ಯ ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಹಾಗೂ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಿ ಹಣವನ್ನು ದೋಚುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿ ವಂಚನೆಗೆ ಒಳಗಾಗದೇ ಎಚ್ಚರವಹಿಸುವಂತೆ ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 2023ರಲ್ಲಿ ಬರಲಿದೆ ಭಾರತದ ಮೊದಲ RRTS ರೈಲು
Advertisement
ಇತ್ತೀಚೆಗೆ ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ ಚಿತ್ರ ದೇಶಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ನೈಜ ಕಥೆಯಾಧಾರಿತ ಸಿನಿಮಾವನ್ನು ವೀಕ್ಷಿಸಲು ಜನರು ಥಿಯೇಟರ್‌ನೆಡೆಗೆ ಓಡುತ್ತಿದ್ದಾರೆ. ಭಾರೀ ಕುತೂಹಲ ಮೂಡಿಸಿರುವ ಸಿನಿಮಾವನ್ನೇ ಇದೀಗ ಸೈಬರ್ ವಂಚಕರು ಲಾಭ ಪಡೆಯಲು ಮುಂದಾಗಿದ್ದಾರೆ.