ಗಾಂಧೀನಗರ: ನಾವು ಗುಜರಾತ್‍ನಲ್ಲಿ (Gujarat Assembly Election) ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಸ್ಟೇಡಿಯಂನ (Narendra Modi Stadium) ಹೆಸರನ್ನು ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಮರುನಾಮಕರಣ ಮಾಡುತ್ತೇವೆ ಎಂದು ಕಾಂಗ್ರೆಸ್ (Congress) ಪ್ರಣಾಳಿಕೆಯಲ್ಲಿ (Manifesto) ಪ್ರಕಟಿಸಿದೆ.
Advertisement
ಮುಂಬರುವ ವಿಧಾನಸಭೆ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಇಂದು ಪ್ರಣಾಳಿಕೆ ಕುರಿತಾಗಿ ತಿಳಿಸಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ನೇತೃತ್ವದಲ್ಲಿ ಸಭೆ ನಡೆದು ಬಳಿಕ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಪ್ರಮುಖವಾಗಿ ಅಹಮದಾಬಾದ್‍ನಲ್ಲಿರುವ ವಿಶ್ವದ ಅತಿ ದೊಡ್ಡ ಕ್ರಿಕೆಟ್ (Cricket) ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂ ಹೆಸರನ್ನು ಬದಲಾಯಿಸುವ ಭರವಸೆ ನೀಡಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – 15 ದಿನಗಳಲ್ಲಿ 40 ರ‍್ಯಾಲಿ ನಡೆಸಲಿದ್ದಾರೆ ಮೋದಿ
Advertisement
Advertisement
ಪ್ರಣಾಳಿಕೆಯಲ್ಲಿ ಎಲ್ಲಾ ಗುಜರಾತಿಗಳಿಗೆ ರಾಜ್ಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದೆ. ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ. ರಾಜ್ಯದ ಪ್ರತಿಯೊಬ್ಬ ಮಹಿಳೆ, ವಿಧವೆ ಮತ್ತು ವೃದ್ಧ ಮಹಿಳೆಗೆ ಮಾಸಿಕ 2,000 ರೂ. ಅನುದಾನ. ಸರ್ಕಾರದಿಂದ 3,000 ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು. ರಾಜ್ಯದ ಹೆಣ್ಣುಮಕ್ಕಳಿಗೆ ಅವರ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ಆಶ್ವಾಸನೆ ನೀಡಿದೆ. ಇದನ್ನೂ ಓದಿ: 30 ಸಾವಿರ ವಾಟ್ಸಾಪ್ ಉಸ್ತುವಾರಿಗಳ ನೇಮಕ – ಗುಜರಾತ್‍ನಲ್ಲಿ ಹೇಗಿದೆ ಬಿಜೆಪಿ ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್?
Advertisement
3 ಲಕ್ಷದವರೆಗಿನ ಕೃಷಿ ಸಾಲ ಮನ್ನಾ. 300 ಯೂನಿಟ್ ಉಚಿತ ವಿದ್ಯುತ್. ಪ್ರತಿ ನಿರುದ್ಯೋಗಿ ಯುವಕರಿಗೆ 3,000 ರೂ. ಮಾಸಿಕ ಅನುದಾನ ಮತ್ತು 500 ರೂ.ಗೆ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಕೊಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದನ್ನೂ ಓದಿ: ಗುಜರಾತ್ ಗೆಲ್ಲಲು ‘ಯುವ’ ಸ್ಟ್ರಾಟರ್ಜಿ – ವಿದ್ಯಾವಂತ ಯುವಕರೇ ಬಿಜೆಪಿ ಅಭ್ಯರ್ಥಿಗಳು
ಈಗಾಗಲೇ ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೂ ಆರು ತಿಂಗಳು ಮುನ್ನವೇ ಕಾಂಗ್ರೆಸ್ ಬಿಜೆಪಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಈ ಬಾರಿ ಆಪ್ ಅಸ್ತಿತ್ವಕ್ಕಾಗಿ ಹೋರಾಟ ಆರಂಭಿಸಿದೆ.
Release of Congress Party's Manifesto for #GujaratElections2022 https://t.co/NoWHwQ72mU
— Ashok Gehlot (@ashokgehlot51) November 12, 2022