ಗಾಂಧೀನಗರ: ಗುಜರಾತ್ನ (Gujarat) ಪಟಾನ್ ಜಿಲ್ಲೆಯ ವರಾಹಿ ಬಳಿ ನಿಂತಿದ್ದ ಟ್ರಕ್ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಜೀಪ್ ಚಾಲಕ ಎಸ್ಕೇಪ್ ಆಗಿದ್ದಾನೆ.
ಜೀಪ್ನಲ್ಲಿ 18 ಮಂದಿ ಪ್ರಯಾಣ ಮಾಡುತ್ತಿದ್ದರು. ಅವರ ಪೈಕಿ 7 ಮಂದಿ ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದಾರೆ. ಅವರ ಐವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲವ್ವರ್ ಹತ್ಯೆಗೂ ಮುನ್ನ ಗೆಳೆಯರ ಜೊತೆ ಎಂಗೇಜ್ಮೆಂಟ್ ಪಾರ್ಟಿ ಮಾಡಿದ್ದ ಕೊಲೆಗಡುಕ!
Advertisement
Advertisement
ಮೃತರನ್ನು ಪಿನಾಲ್ ಮಿಥುನ್ಭಾಯ್ ವಂಜಾರಾ (7), ಕಾಜಲ್ ಮೋಹನ್ಭಾಯ್ ಪರ್ಮಾರ್ (9), ಅಮಿತಾ ಖೇಮರಾಜಭಾಯ್ ವಂಜಾರಾ (15), ಸೀಮಾಬೆನ್ ಮಿಥುನ್ಭಾಯ್ ವಂಜಾರಾ (24), ರಾಘಬೆನ್ ಮೋಹನ್ಭಾಯ್ ಪರ್ಮಾರ್ (35), ಸಂಜುಭಾಯ್ ಬಾಬುಭಾಯ್ ಹೂಗಾರ (50), ಮತ್ತು ದುಘಾಭಾಯಿ ಸೇಜಾಭಾಯಿ ರಾಥೋಡ್ (50) ಎಂದು ಗುರುತಿಸಲಾಗಿದೆ.
Advertisement
ಜೀಪ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ವೇಗವಾಗಿ ಬಂದ ಜೀಪ್ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರ ಮುಸ್ಲಿಂ ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದೆ: ಕೌಸರ್ ಜಹಾನ್
Advertisement
ಜೀಪ್ ತುಂಬಾ ಹಳೆಯದಾಗಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹೊತ್ತೊಯ್ಯುತ್ತಿತ್ತು ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಹಣದ ದುರಾಸೆಯಿಂದ ಜನರನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k