ಮೈಸೂರಿನಲ್ಲಿ ನಿರ್ಮಾಣವಾದ ಮೇರುನಟ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಜನವರಿ 29 ರಂದು ಉದ್ಘಾಟನೆಗೊಳ್ಳಲಿದ್ದು, ಅಭಿಮಾನಿಗಳು ಈ ಸಡಗರವನ್ನು ಕಣ್ತುಂಬಿಕೊಳ್ಳಲು ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಡಾ.ವಿಷ್ಣುಸೇನಾ ಸಮಿತಿಯು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ಅಭಿಮಾನಿಗಳು ಅಂದು ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
Advertisement
ಈ ಕುರಿತು ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಮಾತನಾಡಿ, ‘ಸ್ಮಾರಕ ಉದ್ಘಾಟನೆ ಅನ್ನುವುದು ಅಭಿಮಾನಿಗಳ ಪಾಲಿಗೆ ಜಾತ್ರೆ ಇದ್ದಂತೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಹದಿಮೂರು ವರ್ಷ ಕಾದಿದ್ದೇವೆ. ಹಾಗಾಗಿ ನಮ್ಮ ನಮ್ಮ ಊರುಗಳಿಂದ ಸಂಭ್ರಮ ಶುರುವಾಗಿ ಮೈಸೂರುವರೆಗೂ ಅದು ತಲುಪಲಿದೆ. ಜನವರಿ 29ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಚಿತ್ರೋದ್ಯಮದಲ್ಲಿ ಹಿಂದೆ ಆಗಿರಬಾರದು, ಮುಂದೆ ಆಗಬಾರದು ಆ ರೀತಿಯಲ್ಲಿ ಪ್ಲ್ಯಾನ್ ಮಾಡಲಾಗಿದೆ’ ಎನ್ನುತ್ತಾರೆ. ಇದನ್ನೂ ಓದಿ: ರವಿಚಂದ್ರನ್ ಸಿನಿಮಾದ ಹೆಸರು ಮತ್ತು ನಾಯಕಿ ಬದಲು
Advertisement
Advertisement
ಜನವರಿ 29 ರಂದು ಬೆಳಗ್ಗೆ ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಪುಣ್ಯಭೂಮಿಯಿಂದ ನೂರಾರು ವಾಹನಗಳು ಮೈಸೂರಿಗೆ ಹೊರಡುತ್ತವೆ. ವಿಷ್ಣುವರ್ಧನ್ ಬಾವುಟ ಇರುವ ನೂರಾರು ಕಾರುಗಳು ಪಥಸಂಚಲನದಂತೆ ಬೆಂಗಳೂರಿನಿಂದ ಮೈಸೂರುನತ್ತ ಸಾಗಲಿವೆ. ಅಲ್ಲದೇ, ಬೆಂಗಳೂರಿನಿಂದ ಮೈಸೂರುವರೆಗೂ ಕಟೌಟ್ ಗಳು ರಸ್ತೆಯುದ್ದಕ್ಕೂ ರಾರಾಜಿಸಲಿವೆ. ಮೈಸೂರಿನಲ್ಲಿ ಕುಂಭಮೇಳ, ಜಾನಪದ ವಾದ್ಯಗಳ ಮೆರವಣಿಗೆ, ಜಾನಪದ ಕುಣಿತ, ದೀಪೋತ್ಸವ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Advertisement
ಮೈಸೂರಿಗೆ ಬರುವ ಅಭಿಮಾನಿಗಳಿಗಾಗಿ ವಿಷ್ಣುಸೇನಾ ಸಮಿತಿಯಿಂದಲೇ ಅನ್ನ ಸಂತರ್ಪಣೆ ಮಾಡಲಾಗುತ್ತಿದ್ದು ಕಟೌಟ್, ವಿಷ್ಣು ದೀಪೋತ್ಸವ, ವಿವಿಧ ಪೋಸ್ಟರ್ಸ್, ಕುಂಭಮೇಳ, ವಾಹನ ಪಥಸಂಚಲನ ಇತ್ಯಾದಿ ಕಾರ್ಯಕ್ರಮಗಳನ್ನು ಅಂದು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ್. ಜನವರಿ 29ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವನ್ನು ಲೋಕಾಪರ್ಣೆ ಮಾಡಲಿದ್ದು, ಚಿತ್ರೋದ್ಯಮದ ಹಲವು ಗಣ್ಯರು ಕೂಡ ಭಾಗಿಯಾಗಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k