ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹೊಸ ಸಿನಿಮಾ ಮೊನ್ನೆಯಷ್ಟೇ ಮುಹೂರ್ತವಾಗಿತ್ತು. ಈ ಸಿನಿಮಾಗೆ ಗೌರಿ ಎಂದು ಹೆಸರಿಡಲಾಗಿತ್ತು. ಅಲ್ಲದೇ, ಈ ಸಿನಿಮಾದ ಮೂಲಕ ರೂಪದರ್ಶಿ, ನಟಿ ಬರ್ಖಾ ಸೇನ್ ಗುಪ್ತಾ ಸ್ಯಾಂಡಲ್ ವುಡ್ ಗೆ ಪ್ರವೇಶ ಕೂಡ ಮಾಡಿದ್ದರು. ಇದೀಗ ಈ ಸಿನಿಮಾದಲ್ಲಿ ಭಾರೀ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ನಿರ್ದೇಶಕ ಅನೀಸ್. ಚಿತ್ರಕ್ಕೆ ಹೆಸರು ಹಾಗೂ ನಾಯಕಿಯನ್ನೇ ಬದಲಾಯಿಸಿದ್ದಾರೆ.
- Advertisement 2
ಈ ಬದಲಾವಣೆಗೆ ಕಾರಣವನ್ನು ಅವರು ತಿಳಿಸದೇ ಇದ್ದರೂ, ಗೌರಿ ಅಂತಿಟ್ಟಿದ್ದ ಹೆಸರನ್ನು ಗೌರಿ ಶಂಕರ ಎಂದು ಬದಲಾಯಿಸಿದ್ದಾರೆ. ಬರ್ಖಾ ಸೇನ್ ಗುಪ್ತಾ ಜಾಗಕ್ಕೆ ಕನ್ನಡದ್ದೇ ಹುಡುಗಿ ಅಪೂರ್ವ ಅವರನ್ನು ಕರೆತಂದಿದ್ದಾರೆ. ಈ ಹಿಂದೆ ರವಿಚಂದ್ರನ್ ನಟನೆಯ ಅಪೂರ್ವ ಸಿನಿಮಾಗೆ ನಾಯಕಿಯಾಗಿದ್ದ ಈ ಹುಡುಗಿಯೇ ಮತ್ತೊಮ್ಮೆ ರವಿಚಂದ್ರನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಪೂರ್ವ ಅಂತ ಈ ನಟಿಗೆ ಹೆಸರಿಟ್ಟಿದ್ದೇ ರವಿಚಂದ್ರನ್ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್
- Advertisement 3
- Advertisement 4
ಅಪೂರ್ವ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾಗಿದ್ದ ಈ ನಟಿ ಶರಣ್ ಜೊತೆ ವಿಕ್ಟರಿ 2 ಸಿನಿಮಾದಲ್ಲೂ ನಟಿಸಿದ್ದರು. ಈಗ ಮತ್ತೆ ರವಿಚಂದ್ರನ್ ಅವರಿಗೆ ಜೊತೆಯಾಗಿದ್ದಾರೆ. ಇದೇ ಜನವರಿ 22 ರಿಂದ ನಡೆಯಲಿರುವ ಚಿತ್ರೀಕರಣದಲ್ಲಿ ನಟಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜ.22 ರಂದು ದಾಂಡೇಲಿಯಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ರವಿಚಂದ್ರನ್, ಅಪೂರ್ವ ಜೊತೆ ಕ್ಯಾಡಬೊಮ್ ಹೇಡರ್ ಹೆಸರಿನ ನಾಯಿ ಕೂಡ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k