ನವದೆಹಲಿ/ಲಕ್ನೋ: ರಾಮಮಂದಿರ (Ram Mandir) ನಿರ್ಮಾಣದ ಬಳಿಕ ಇದು ಮೊದಲ ರಾಮನವಮಿ (Ram Navami) ಆಗಿದ್ದು, ಇದನ್ನು ಅದ್ಧೂರಿಯಾಗಿ ಆಚರಿಸಲು ಅಯೋಧ್ಯೆ (Ayodhya) ಸಜ್ಜಾಗಿದೆ.
ಇಂದು ಅಯೋಧ್ಯೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಜನಸಂದಣಿಯ ನಿಯಂತ್ರಣಕ್ಕೆ ಎಲ್ಲಾ ವಿಶೇಷ ದರ್ಶನಗಳ ವ್ಯವಸ್ಥೆ ರದ್ದು ಮಾಡಿದೆ. ಇದಲ್ಲದೇ ವಿಶೇಷ ಪ್ರಸಾದ ವ್ಯವಸ್ಥೆಯೂ ಮಾಡಲಾಗಿದೆ. ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಿಸಲಾಗುತ್ತಿದ್ದು, ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಎಲ್ಲೆಡೆ ತಳಿರು ತೋರಣ ಕಂಗೊಳಿಸುತ್ತಿದ್ದು, ಮಂದಿರಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ರಾಮನವಮಿ ಹಿನ್ನೆಲೆ ವಿಶೇಷ ಪೂಜೆ ಕೈಕಂಕರ್ಯಗಳನ್ನು ಮಾಡಲಾಗುತ್ತಿದೆ. ಇದನ್ನೂ ಓದಿ: ಮರುಭೂಮಿ ದೇಶ ದುಬೈನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ವಿಮಾನ ನಿಲ್ದಾಣ
Advertisement
Advertisement
ಬೆಳಗ್ಗೆ 3:30 ರಿಂದ ಬಾಲರಾಮನ ದರ್ಶನ ಪ್ರಾರಂಭವಾಗಿದೆ. ಬ್ರಾಹ್ಮೀ ಮುಹೂರ್ತದ 3:30ಕ್ಕೆ ಮಂಗಳಾರತಿ ನಂತರ ಅಭಿಷೇಕ, ಶೃಂಗಾರ ಮತ್ತು ದರ್ಶನ ಸೇರಿ ಮುಂಜಾನೆಯ ಧಾರ್ಮಿಕ ವಿಧಿಗಳು ಪ್ರಾರಂಭವಾಗಿವೆ. ಮುಂಜಾನೆ 5:00 ಗಂಟೆಗೆ ಶೃಂಗಾರ ಆರತಿ ನಂತರ ಪರಿಸ್ಥಿತಿಗೆ ಅನುಗುಣವಾಗಿ ನೈವೇದ್ಯ ಮತ್ತು ಶಯನ ಆರತಿ ವ್ಯವಸ್ಥೆ ಇದ್ದು, ಶಯನ ಆರತಿಯ ನಂತರ ಮಂದಿರ ನಿರ್ಗಮನ ದ್ವಾರದ ಬಳಿ ಪ್ರಸಾದ ವಿನಿಯೋಗವಾಗುತ್ತಿದೆ. ಮಂಗಳಾರತಿಯಿಂದ ಆರಂಭಗೊಂಡು ರಾತ್ರಿ 11 ಗಂಟೆಯವರೆಗೆ ದರ್ಶನ ನಡೆಯಲಿದೆ. ನಾಲ್ಕು ಭೋಗ್ ನೈವೇದ್ಯಗಳ ಸಮಯದಲ್ಲಿ ಕೇವಲ ಐದು ನಿಮಿಷಗಳ ಕಾಲ ಪರದೆ ಮುಚ್ಚಲಿದ್ದು, ಬಾಕಿ ಸಮಯದಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿದೆ. ಇದನ್ನೂ ಓದಿ: ರಾಮನವಮಿಯ ಹಿನ್ನೆಲೆ ಏನು?- ಆಚರಣೆ ಹೇಗೆ?
Advertisement
Advertisement
ಬಾಲರಾಮನ ಹಣೆಗೆ ಸೂರ್ಯರಶ್ಮಿ ತಿಲಕ:
ಇನ್ನು ರಾಮನವಮಿ ದಿನದಂದು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳುತ್ತದೆ. ಇದು ಈ ಬಾರಿಯ ವಿಶೇಷವಾಗಿದೆ. ಈ ವರ್ಷದಿಂದ ಪ್ರತಿ ವರ್ಷ ರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲು ವ್ಯವಸ್ಥೆ ಮಾಡಿದೆ. ಇದನ್ನೂ ಓದಿ: ಚಿತ್ರರಂಗಕ್ಕೆ ದ್ವಾರಕೀಶ್ ಕೊಡುಗೆ ಅಪಾರ- ನರೇಂದ್ರ ಮೋದಿ ಸಂತಾಪ
ವಿಶೇಷ ಅಂದರೆ ಇದಕ್ಕೆ ಸಹಕಾರಿಯಾದ ಆಪ್ಟಿಕಲ್ ಯಂತ್ರವನ್ನು ಬೆಂಗಳೂರು ಮೂಲದ ಕಂಪನಿಯೊಂದು ರಾಮ ಜನ್ಮಭೂಮಿ ಟ್ರಸ್ಟ್ಗೆ ಕೊಡುಗೆಯಾಗಿ ನೀಡಿದೆ. ಎರಡು ಸಾರ್ವಜನಿಕ ಸಂಸ್ಥೆಗಳು ಮತ್ತು ಜೈನ ಕುಟುಂಬ ನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಕಂಪನಿಯು ಅಯೋಧ್ಯೆ ರಾಮಮಂದಿರಕ್ಕೆ ‘ಸೂರ್ಯ ತಿಲಕ ಯಂತ್ರ’ವನ್ನು ಕೊಡುಗೆಯಾಗಿ ನೀಡಿದೆ. 84 ಲಕ್ಷ ರೂ. ಮೌಲ್ಯದ ಈ ಯಂತ್ರವನ್ನು ಜಿಗಣಿ ಲಿಂಕ್ ರಸ್ತೆಯಲ್ಲಿರುವ ಆಪ್ಟಿಕ್ಸ್ & ಅಲೈಡ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕೊಡುಗೆಯಾಗಿ ನೀಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ‘ಜೈ ಶ್ರೀರಾಮ್’ ಎಂದ ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬ
ಟೈಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ಯಂತ್ರ ರೂಪಿಸಲಾಗಿದೆ. ಇದು ಪೆರಿಸ್ಕೋಪ್‌ನಂತೆ ಕಾರ್ಯನಿರ್ವಹಿಸುತ್ತದೆ. ಪೆರಿಸ್ಕೋಪಿಕ್ ವ್ಯವಸ್ಥೆಯಲ್ಲಿನ ಕನ್ನಡಿಯು ರಾಮನವಮಿಯಂದು ನಿರ್ದಿಷ್ಟ ಕೋನದಲ್ಲಿ ಸೂರ್ಯನ ಬೆಳಕನ್ನು ಸೆರೆಹಿಡಿಯುತ್ತದೆ. ಸೆರೆ ಹಿಡಿದ ಬೆಳಕು ವಿಗ್ರಹದ ಹಣೆ ಮೇಲೆ ನಿಖರವಾಗಿ ಮೂಡುತ್ತದೆ ಎಂದು ಹೇಳಲಾಗಿದೆ. ರಾಮನ ಹಣೆಗೆ ಬೀಳುವ ಸೂರ್ಯನ ರಶ್ಮಿ ಭಕ್ತರನ್ನು ಮಂತ್ರ ಮುಗ್ದರನ್ನಾಗಿಸಲಿದೆ. ಇದನ್ನೂ ಓದಿ: UPSC Result: 25ಕ್ಕೂ ಹೆಚ್ಚು ಕನ್ನಡಿಗರ ಆಯ್ಕೆ- ಪಬ್ಲಿಕ್ ಟಿವಿ ‘ಬೆಳಕು’ ಹೀರೋ ಶಾಂತಪ್ಪ 644ನೇ ರ‍್ಯಾಂಕ್
1,11,111 ಕೆಜಿ ಲಡ್ಡುಗಳ ನೈವೇದ್ಯ:
ರಾಮನವಮಿ ಹಿನ್ನೆಲೆ ಅಯೋಧ್ಯೆಯ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುಗಳನ್ನು ನೈವೇದ್ಯ ಮತ್ತು ಭಕ್ತರ ವಿತರಣೆಗಾಗಿ ಕಳುಹಿಸಲಾಗಿದೆ. ದೇವ್ರಹ ಹನ್ಸ್ ಬಾಬಾ ಟ್ರಸ್ಟ್ನ ಟ್ರಸ್ಟ್ ಕಡೆಯಿಂದ ಈ ಲಡ್ಡುಗಳನ್ನು ನೀಡಲಾಗುತ್ತಿದೆ. ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದೆಲ್ಲೆಡೆ ಸ್ಥಾಪಿಸಲಾದ 80 ರಿಂದ 100 ಎಲ್‌ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದನ್ನೂ ಓದಿ: ಸುರ್ಜೇವಾಲಾಗೆ ಶಾಕ್ – 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ