– ದಸರಾ ವೇಳೆಗೆ ಕೆಆರ್‌ಎಸ್‌ನಲ್ಲೂ ಕಾವೇರಿ ಆರತಿ
ಬೆಂಗಳೂರು: ವಿಶ್ವಜಲದಿನದ ಅಂಗವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಜಲಸಂಪನ್ಮೂಲ ಹಾಗೂ ನೀರಾವರಿ ಇಲಾಖೆಯಿಂದ ಮಲ್ಲೇಶ್ವರದ ಸ್ಯಾಂಕಿ ಕೆರೆ ಆವರಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ʻಕಾವೇರಿ ಆರತಿʼ (Cauvery Aarti) ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಚಾಲನೆ ನೀಡಿದರು.
ವಾರಣಾಸಿಯ ಗಂಗಾ ಆರತಿ (Varanasi Ganga Aarti) ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಕಾವೇರಿ ಆರತಿ ನಡೀತು. ಮಲ್ಲೇಶ್ವರದ ಹೃದಯ ಭಾಗದಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಕಾವೇರಿ ತಾಯಿಗೆ ಗೌರವ ಸೂಚಿಸಲಾಯಿತು. ಭಾಗಮಂಡಲದಿಂದ ತಂದ ಕಾವೇರಿ ಜಲಕ್ಕೆ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಇದನ್ನೂ ಓದಿ: ನೆಲ, ಜಲಕ್ಕಾಗಿ ಮಾ.22ರಂದು ಅಖಂಡ ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ಗಮನಿಸಿ..
ಇದೇ ವೇಳೆ, ಗಂಗಾ ದೇವಿಗೆ ಹೋಮ ಸಲ್ಲಿಸಲಾಯಿತು. ಬಳಿಕ 108 ಕಲಶಗಳೊಂದಿಗೆ ಮೆರವಣಿಗೆ ಮೂಲಕ ಸ್ಯಾಂಕಿ ಕೆರೆಗೆ ತರಲಾಯಿತು. ಕಾವೇರಿ ಮಾತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ವಿಶ್ವ ಜಲದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಸ್ಯಾಂಕಿ ಕೆರೆಯ ತೇಲುವ ವೇದಿಕೆಯಲ್ಲಿ ವಾರಾಣಸಿಯ ಪ್ರಸಿದ್ಧ ತಂಡದಿಂದ ಕಾವೇರಿ ಆರತಿ ಮೂಲಕ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿತು. ಗಾಯಕಿ ಅನನ್ಯಾ ಭಟ್, ರಘು ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದರೆ, 3ಡಿ ಮ್ಯಾಪಿಂಗ್ ಮಾದರಿಯಲ್ಲಿ ವಿದ್ಯುತ್ ಅಲಂಕಾರ ಇತ್ತು.
ಬಳಿಕ ಮಾತನಾಡಿದ ಡಿಕೆಶಿ, ಶನಿವಾರ ವಿಶ್ವ ಜಲದಿನ, ಕಾವೇರಿ ಆರತಿ ಮೂಲಕ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವಿದೆ. 25ಕ್ಕೂ ಹೆಚ್ಚು ಶಾಸಕರು ಆಗಮಿಸಿದ್ದಾರೆ. ಇವತ್ತು ತಲಕಾವೇರಿಯಿಂದ ನೀರು ತಂದಿದ್ದೇವೆ. ಇಲ್ಲಿ ಸುತ್ತಮುತ್ತ ಪೌರಾಣಿಕ ದೇವಾಲಯಗಳಿವೆ, ಶಕ್ತಿ ದೇವತೆಗಳು ಇವೆ. ನೀರಿಲ್ಲದೇ ಯಾರ ಬದುಕಿಲ್ಲ, ಹಾಗಾಗಿ ನೀರನ್ನು ಉಳಿಸಬೇಕಿದೆ. ದಸರಾ ವೇಳೆಗೆ ಕೆಆರ್‌ಎಸ್ ಡ್ಯಾಮ್‌ನ ಕೆಳಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡ್ತೇವೆ. ಎಷ್ಟೇ ಕಷ್ಟ ಬಂದ್ರೂ ಬೆಂಗಳೂರಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗಬಾರದು ಅಂತಾ ಸಂಕಲ್ಪ ಮಾಡತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಲ್ಲಿನ ಉತ್ಪನ್ನಗಳ ಮೇಲೆ ರಾಜಧನ ಹೆಚ್ಚಳ ಮಾಡಿದ ಸರ್ಕಾರ – ಟಿಪ್ಪರ್ ಮಾಲೀಕರ ಮುಷ್ಕರ