ಬಾಲಿವುಡ್ ನಟ ಗೋವಿಂದ (61) (Govinda) ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಜ್ಞೆತಪ್ಪಿದ ಪರಿಣಾಮ ಅವರನ್ನ ಮುಂಬೈನ ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ (ICU Treatment) ಕೊಡಿಸಲಾಗಿತ್ತು, ಎಲ್ಲಾ ರೀತಿ ತಪಾಸಣೆ ಮುಗಿದ ಬಳಿಕ ಅವರನ್ನ ಡಿಶ್ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಆಕಸ್ಮಿಕವಾಗಿ ಗುಂಡು ತಗುಲಿದ್ದಕ್ಕಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗಂಡಾಂತರದಿಂದ ಗೋವಿಂದ ಪಾರಾಗಿದ್ದರು. ಮಂಗಳವಾರವಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಧರ್ಮೇಂದ್ರ ಅವರ ಆರೋಗ್ಯ ವಿಚಾರಿಸಿ ಬಂದಿದ್ರು. ಮರುದಿನವೇ ಗೋವಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ಸದ್ಯಕ್ಕೆ ಎಲ್ಲಾ ರೀತಿಯ ಪರೀಕ್ಷೆಗಳು ನಡೆದಿದ್ದು ವರದಿಗಾಗಿ ಕುಟುಂಬಸ್ಥರು ಕಾದಿದ್ದಾರೆ.
ಗೋವಿಂದ ಫ್ಯಾಮಿಲಿ ಅಡ್ವೋಕೇಟ್ ಲಲಿತ್ ಬಿಂದಲ್ ಮಾಹಿತಿ ಪ್ರಕಾರ, ತೀವ್ರ ಸುಸ್ತಾಗಿ ಪ್ರಜ್ಞೆ ತಪ್ಪಿಸಿದ್ದರು. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಆರೋಗ್ಯ ಸ್ಥಿರವಾಗಿದೆ. ಕೆಲವೇ ಗಂಟೆಗಳು ಮಾತ್ರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಎಲ್ಲಾ ರೀತಿಯ ಪರೀಕ್ಷೆ ನಡೆಸಿದ ಬಳಿಕ ಅವರನ್ನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ್ಮೇಲ್ ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಿಂದ, ನಾನು ಚೆನ್ನಾಗಿದ್ದೇನೆ. ತುಂಬಾ ಜಾಸ್ತಿ ವರ್ಕೌಟ್ ಮಾಡಿದೆ, ಅದರಿಂದ ಆಯಾಸಗೊಂಡಿದೆ. ಆದ್ರೆ ಯೋಗ, ಪ್ರಾಣಾಯಾಮ ಚೆನ್ನಾಗಿದೆ. ಭಾರೀ ವ್ಯಾಯಾಮಕ್ಕಿಂತ ಯೋಗ ಉತ್ತಮವಾಗಿದೆ. ಈ ಮೂಲಕವೇ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.



