ಅರ್ಕಾವತಿ ರೀಡೂ ಪ್ರಕರಣದತ್ತ ರಾಜ್ಯಪಾಲರ ಚಿತ್ತ – ಸಿಎಂಗೆ ಮತ್ತೊಂದು ಸಂಕಷ್ಟ?

Public TV
1 Min Read
THAWAR CHAND GEHLOT

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ.

ಅರ್ಕಾವತಿ ರಿಡೂ (Arkavathy Layout Redo) ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಸಿಟಿ ರವಿ (CT Ravi) ನೀಡಿದ್ದ ದೂರನ್ನು ರಾಜ್ಯಪಾಲರು ಅಸ್ತ್ರ ಮಾಡಿಕೊಂಡಂತೆ ಕಾಣುತ್ತಿದ್ದು ಕೆಂಪಣ್ಣ ಆಯೋಗದ (Kempanna Commission) ವರದಿ ಸ್ಟೇಟಸ್ ರಿಪೋರ್ಟ್ ಕೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

Siddaramaiah 7

ಸಂಪೂರ್ಣ ಸ್ಟೇಟಸ್ ರಿಪೋರ್ಟ್ ನೀಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದಾರೆ. ರಾಜ್ಯಪಾಲರ ಸೂಚನೆ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆ ವರದಿ ಸಿದ್ಧಪಡಿಸಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಕೆಂಪಣ್ಣ ಆಯೋಗದ ವರದಿಯ ಅಂಶಗಳನ್ನು ನಗರಾಭಿವೃದ್ಧಿ ಇಲಾಖೆ ಸಲ್ಲಿಸಿತ್ತು.

ಸೋಮವಾರದ ಬಳಿಕ ಬೆಂಗಳೂರು ಅಭಿವೃದ್ಧಿ ಇಲಾಖೆಯಿಂದ ರಾಜ್ಯಪಾಲರಿಗೆ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

 

Share This Article