– ರಾಜ್ಯಗಳಿಗೆ ವಾಣಿಜ್ಯ ಎಲ್‌ಪಿಜಿ ಮಿತಿ ಶೇ.70 ಕ್ಕೆ ಏರಿಕೆ
ನವದೆಹಲಿ: ದೇಶದಲ್ಲಿ ತೈಲ ಬಿಕ್ಕಟ್ಟು ಉಲ್ಭಣಗೊಂಡ ಬಳಿಕ ನಾನಾ ಸುದ್ದಿಗಳು ಹರಿದಾಡುತ್ತಿವೆ. ತೈಲ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಲಾಕ್‌ಡೌನ್ (lockdown) ಜಾರಿ ಮಾಡಬಹುದು ಅನ್ನೋ ಬಿಟ್ಟಿ ಸುದ್ದಿಗಳನ್ನ ಹರಿಯಬಿಡಲಾಗಿತ್ತು. ಅದಕ್ಕೆ ಖುದ್ದು ಕೇಂದ್ರ ಸರ್ಕಾರ (Central Government) ಸ್ಪಷ್ಟನೆ ಕೊಟ್ಟಿದೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Puri) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ – ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರೀ ಇಳಿಕೆ!

ʻಜಾಗತಿಕ ಪರಿಸ್ಥಿತಿ ಅಸ್ಥಿರವಾಗಿದ್ದು, ಇಂಧನ, ಪೂರೈಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ. ಭಾರತದಲ್ಲಿ ಲಾಕ್‌ಡೌನ್ ಬಗ್ಗೆ ಇರುವ ವದಂತಿಗಳು ಶುದ್ಧ ಸುಳ್ಳು. ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆಗಳೂ ಇಲ್ಲ. ಇಂತಹ ಸಮಯದಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಇರೋದು ಸೂಕ್ತ. ಈ ರೀತಿಯ ವದಂತಿಗಳು ಸಮಾಜಕ್ಕೆ ಹಾನಿಕಾರಕ ವಾಗಲಿದೆʼ ಅಂತ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಗ್ಯಾಸ್ ಅಭಾವದ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ 247 ಸಿಲಿಂಡರ್ ಜಪ್ತಿ
ಕಮರ್ಷಿಯಲ್ ಗ್ಯಾಸ್ ಮಿತಿ ಶೇ.70ಕ್ಕೆ ಏರಿಕೆ
ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿನ ಸಮಸ್ಯೆ ಬಗೆಹರಿಕೆಗೆ ಕೇಂದ್ರ ಮುಂದಾಗಿದೆ. ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಶೇ.20ರಷ್ಟು ಗ್ಯಾಸ್ ಹೆಚ್ಚಳ ಮಾಡಿದೆ. ಈಗಿರುವ ಕಮರ್ಷಿಯಲ್ ಗ್ಯಾಸ್ ಮಿತಿ ಶೇ.50 ರಿಂದ 70ಕ್ಕೆ ಹೆಚ್ಚಳವಾಗಲಿದೆ. ಕೈಗಾರಿಕೆ, ಜವಳಿ ಸೇರಿದಂತೆ ಹಲವು ವಲಯಗಳಿಗೆ ಅನುಕೂಲವಾಗಲಿದೆ.

ಎಲ್ಲಾ ರಾಜ್ಯಗಳ ಸಿಎಂ ಜೊತೆಗೆ ಮೋದಿ ಸಭೆ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ 4ನೇ ವಾರಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಸಂಜೆ 6.30 ಕ್ಕೆ ವಿಡಿಯೋ ಸಂವಾದ ನಡೆಸಲಿರುವ ಮೋದಿ ಕೊಲ್ಲಿ ಯುದ್ಧದ ಬಿಕ್ಕಟ್ಟು ಎದುರಿಸಲು ಸಲಹೆ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮಾತುಕತೆ ಚೆನ್ನಾಗಿ ನಡೆಯುತ್ತಿದೆ – ಮತ್ತೆ 10 ದಿನ ಕದನ ವಿರಾಮ ಘೋಷಿಸಿದ ಟ್ರಂಪ್
ಸಿಎಂಗಳೊಂದಿಗೆ ಮೋದಿ ಸಭೆ.. ಏನೆಲ್ಲ ಚರ್ಚೆ..?
> ಎಲ್‌ಪಿಜಿ ಅಭಾವವನ್ನ ಎದುರಿಸಲು ಕೈಗೊಂಡ ಕ್ರಮಗಳು
> ಪೂರೈಕೆ ಸರಪಳಿ ವ್ಯವಸ್ಥೆ, ಇಂಧನ ಭದ್ರತೆ ಬಗ್ಗೆ ಚರ್ಚೆ
> ಯುದ್ಧ ಪೀಡಿತ ದೇಶಗಳಲ್ಲಿರುವ ಭಾರತೀಯರ ಸುರಕ್ಷತೆ
> ದೇಶದ ಆಂತರಿಕ ಸ್ಥಿರತೆ ಬಗ್ಗೆ ಚರ್ಚೆ
> ರಾಜ್ಯಗಳ ನಡುವಿನ ಸಮನ್ವಯತೆಯ ಖಚಿತತೆ
> ಬಿಕ್ಕಟ್ಟು ಎದುರಿಸಲು ಟೀಂ ಇಂಡಿಯಾ ರೀತಿ ಸಮನ್ವಯತೆ
> ಸಂಘರ್ಷಮಯ ಸ್ಥಿತಿಯಲ್ಲಿ ಒಗ್ಗಟ್ಟಿನ ಮಂತ್ರ ಪಠಣೆ

