ಹಿಜಬ್, ಹಲಾಲ್‍ನಿಂದಾಗಿ ಬೆಲೆ ಏರಿಕೆಯ ಗಮನ ದೂರವಾಗಿದೆ: ಶಶಿ ತರೂರ್

Public TV
2 Min Read
Shashi Tharoor 1

ನವದೆಹಲಿ: ಹಿಜಬ್, ಹಲಾಲ್ ಮತ್ತು ಆಜಾನ್‍ಗಳ ಅರ್ಥಹೀನ ವಿವಾದದಿಂದಾಗಿ ಬೆಲೆ ಏರಿಕೆ ಹಾಗೂ ಹಣದುಬ್ಬರದಂತಹ ಗಂಭೀರ ಸಮಸ್ಯೆಯ ಗಮನ ದೂರವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಲೋಕಸಭೆಯಲ್ಲಿ ಅಂಗಿಕಾರಗೊಂಡ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಮಸೂದೆಯ ಹೊರತಾಗಿಯೂ ಸಾಮೂಹಿಕ ವಿಚಲನಕ್ಕೆ ಸರ್ಕಾರವು ನಿಜವಾದ ಅಸ್ತ್ರಗಳನ್ನು ಹೊಂದಿದೆ. ಅದುವೇ ಹಲಾಲ್, ಹಿಜಬ್ ಮತ್ತು ಆಜಾನ್‍ಗಳ ಅರ್ಥಹೀನ ವಿವಾದಗಳಿಂದಾಗಿ ಬೆಲೆ ಏರಿಕೆಯ ಗಮನವನ್ನು ದೂರ ಮಾಡಿದ್ದಾರೆ ಎಂದು ಟೀಕಿಸಿದರು.

ಗುರುವಾರ ಸಂಸತ್ತನ್ನು ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿ ಮುಂದೂಡಲಾಗಿದೆ. ಕಲಾಪವನ್ನು ಮುಂದೂಡುವ ಬದಲು ಇಂಧನ ಬೆಲೆ ಏರಿಕೆ ಮತ್ತು ಗ್ರಾಹಕರ ಹಣದುಬ್ಬರದ ಬಗ್ಗೆ ಗಂಭೀರ ಚರ್ಚೆಯನ್ನು ಕೇಳುವ ಧೈರ್ಯವನ್ನು ಹೊಂದಿರಬೇಕು. ಆದರೆ ಸರ್ಕಾರವು ಬೆಲೆ ಏರಿಕೆಯ ಬಗ್ಗೆ ಚರ್ಚಿಸಲು ಬಯಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

Petrol pump e1632889380797

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ದೈನಂದಿನ ಹೆಚ್ಚಳವು ಸಂಸತ್ತಿನ ಅಧಿವೇಶನಗಳಲ್ಲಿ ಪ್ರಾಬಲ್ಯ ಸಾಧಿಸಿತು. ಪ್ರತಿಪಕ್ಷ ನಾಯಕರು ಇಂಧನ ಬೆಲೆ ಗಗನಕ್ಕೇರುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಕಳೆದ 16 ದಿನಗಳಲ್ಲಿ ಇಂಧನ ಬೆಲೆ ಲೀಟರ್‌ಗೆ 10 ಏರಿಕೆಯಾಗಿದೆ. ಇದನ್ನೂ ಓದಿ: ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಮನೆಗೆ ಭೇಟಿ ಕೊಟ್ಟ ನವಜೋತ್ ಸಿಂಗ್ ಸಿಧು

ಹಣಕಾಸು ಮಸೂದೆ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬೆಲೆ ಏರಿಕೆಗೂ ರಷ್ಯಾ-ಉಕ್ರೇನ್ ಯುದ್ಧದ ಸಂಬಂಧವಿದೆ. ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಯುದ್ಧವು ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತದೆ, ಪೂರೈಕೆ ಸರಪಳಿಗಳು ವಿಶೇಷವಾಗಿ ಕಚ್ಚಾ ತೈಲದ ಮೇಲೆ ಅಡ್ಡಿಪಡಿಸುತ್ತವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *