ನವದೆಹಲಿ/ಬೀಜಿಂಗ್: ಕೋವಿಡ್ ವೈರಸ್ (Corona Virus) ಸೃಷ್ಟಿಕರ್ತ ಚೀನಾ (China) ದೇಶವೀಗ ಮತ್ತೆ ವೈರಸ್ ಅಟ್ಟಹಾಸಕ್ಕೆ ತತ್ತರಿಸಿದೆ. ನಿತ್ಯವೂ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ವರದಿ ಆಗ್ತಿದ್ದು, ಆಸ್ಪತ್ರೆಗಳೆಲ್ಲಾ (Hospitals) ಹೌಸ್‌ಫುಲ್ ಆಗಿಬಿಟ್ಟಿವೆ.
Advertisement
ಲಕ್ಷಾಂತರ ಮಂದಿ ಸೋಂಕಿನಿಂದ ನಲುಗ್ತಿದ್ದಾರೆ. ನಿನ್ನೆ ಬೀಜಿಂಗ್‌ನಲ್ಲಿ ಕೋವಿಡ್‌ಗೆ ಇಬ್ಬರು ಬಲಿ ಆಗಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಒಂದು ವಾರದ ಅಂತರದಲ್ಲಿ ಬೀಜಿಂಗ್‌ನಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 2,700ಕ್ಕಿಂತಲೂ ಹೆಚ್ಚಾಗಿದೆ. ಇದನ್ನೂ ಓದಿ: ಬಿಜೆಪಿಯನ್ನು ನಾಯಿ, ಇಲಿ ಎಂದು ಟೀಕಿಸಿದ ಖರ್ಗೆ ಜೊತೆ ಊಟ ಮಾಡಿದ ಮೋದಿ
Advertisement
Advertisement
ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೀಜಿಂಗ್‌ನ ಸ್ಮಶಾನಗಳೆಲ್ಲ ಕೋವಿಡ್ ಶವಗಳಿಂದ ತುಂಬಿಹೋಗಿವೆ. ಪ್ರತಿದಿನ ಏನಿಲ್ಲ ಅಂದ್ರೂ ಒಂದೊಂದು ಸ್ಮಶಾನಕ್ಕೆ ಕನಿಷ್ಠ 200 ಶವ ಬರ್ತಿವೆ. ಇದು ಆರಂಭ ಮಾತ್ರ. ಮುಂದಿನ ಮೂರು ತಿಂಗಳಲ್ಲಿ ಚೀನಾದ ಶೇ.60ರಷ್ಟು ಜನರನ್ನು ಕೋವಿಡ್ ಆವರಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ
Advertisement
ಚೀನಾ ಸರ್ಕಾರ ಝೀರೋ ಕೋವಿಡ್ ಪಾಲಿಸಿಯನ್ನು ಕೈಬಿಟ್ಟ ನಂತರ ಚೀನಾಗೆ ಈ ಸ್ಥಿತಿ ಬಂದೊದಗಿದೆ. ಚೀನಾ, ಜಪಾನ್, ಅಮೆರಿಕಾ ಸೇರಿ ಹಲವು ದೇಶಗಳಲ್ಲಿ ಕೋವಿಡ್ ಕೇಕೆ ಹಾಕುತ್ತಿರುವ ಕಾರಣ, ಭಾರತ ಸರ್ಕಾರ (Government Of India) ಅಲರ್ಟ್ ಆಗಿದೆ. ನಿತ್ಯ ವರದಿ ಆಗೋ ಪಾಸಿಟಿವ್ ಪ್ರಕರಣವನ್ನು ಜಿನೋಮ್ (Genome Sequencing) ಟೆಸ್ಟ್ ಕಳಿಸಬೇಕೆಂದು ರಾಜ್ಯಗಳಿಗೆ ಆದೇಶ ನೀಡಿದೆ. ಸದ್ಯಕ್ಕೆ ನಮ್ಮ ದೇಶದಲ್ಲಿ ವಾರಕ್ಕೆ 1,200 ಕೇಸ್‌ಗಳು ದಾಖಲಾಗುತ್ತಿವೆ.