ಉಡುಪಿ: ಹೊಸವರ್ಷದ ಎರಡು ದಿನವಾದರೂ ನಮಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ಮಾಡಿಕೊಡಿ. ರಸ್ತೆ, ರಸ್ತೆಯಲ್ಲಿ ಕುಣಿತಕ್ಕೆ ಬ್ರೇಕ್ ಹಾಕಿ. ಕುಡಿತಕ್ಕೆ ಯಾಕೆ ತಡೆಯೊಡ್ಡುತ್ತೀರಿ ಎಂದು ಬಾರ್, ರೆಸ್ಟೋರೆಂಟ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಅವರು, ನಮ್ಮ ಆರ್ಥಿಕ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ನಾವು ಆರ್ಥಿಕವಾಗಿ ಸಂಪೂರ್ಣವಾಗಿ ಸೋತು ಹೋಗಿದ್ದೇವೆ. ರೆಸ್ಟೋರೆಂಟ್ ಇರುವವರು ಬಹಳ ಸಂಕಷ್ಟದಲ್ಲಿದ್ದಾರೆ. ಹೊಸವರ್ಷದ ಎರಡು ದಿನವಾದರೂ ನಮಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ಮಾಡಿಕೊಡಿ. ಎರಡು ದಿನ ದೊಡ್ಡಮಟ್ಟದ ವ್ಯಾಪಾರ ಆಗುತ್ತದೆ. ಈ ಹಿಂದೆ ಆದ ನಷ್ಟದಿಂದ ನಾವು ಸ್ವಲ್ಪವಾದರೂ ಚೇತರಿಸಿಕೊಳ್ಳುತ್ತೇವೆ ಎಂದು ಹತಾಶೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಪ್ರಕಟಣೆ – ಕರಾವಳಿಗರ ಮನಗೆದ್ದ ಪೈಲಟ್
Advertisement
Advertisement
ರಾಜ್ಯದಲ್ಲಿ ಸುಮಾರು 5,500ಕ್ಕಿಂತಲೂ ಹೆಚ್ಚು ಮದ್ಯ ಮಾರಾಟಗಾರರ ಇದ್ದಾರೆ. ನಮ್ಮ ನಷ್ಟಕ್ಕೆ ಬ್ಯಾಂಕಿನವರು ಬರುವುದಿಲ್ಲ. ಗ್ರಾಹಕರು ಬರುವುದಿಲ್ಲ ಸರ್ಕಾರವು ಬೆಂಬಲಿಸಲ್ಲ. ಜಿಎಸ್‍ಟಿ ಸಂಸ್ಥೆಯವರು ನಮ್ಮ ಕಷ್ಟವನ್ನು ಕೇಳುವುದಿಲ್ಲ. ತೆರಿಗೆ ಪಾವತಿಸಲು ಎರಡು ಕಂತುಗಳನ್ನು ಅವಕಾಶ ಕೊಟ್ಟದ್ದು ಬಿಟ್ಟರೆ ಬೇರೆ ಏನು ಸಹಾಯ ವಾಗಿಲ್ಲ. ಕಟ್ಟಡ ತೆರಿಗೆ ಪಂಚಾಯತ್ ಲೈಸೆನ್ಸ್ ಇಲ್ಲೆಲ್ಲೂ ವಿನಾಯತಿಗಳನ್ನು ಸರ್ಕಾರ ಕೊಟ್ಟಿಲ್ಲ ಎಂದರು.
Advertisement
ಆರ್ಥಿಕವಾಗಿ ಸಂಕಷ್ಟವಾದರೆ ವ್ಯವಹಾರಸ್ಥ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ವ್ಯಾಪಾರಿಯ ಆರೋಗ್ಯ ಸರ್ಕಾರಕ್ಕೆ ಮುಖ್ಯ ಅಲ್ಲವೇ ಎಂದು ಗೋವಿಂದರಾಜ ಹೆಗ್ಡೆ ಪ್ರಶ್ನೆ ಮಾಡಿದ್ದಾರೆ. ಆಹಾರವಿರುತ್ತದೆ ಮದ್ಯ ಸೇವಿಸಲು ಲೈಸನ್ಸ್ ಟೈಮಿಂಗ್‍ನಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ. ಡಿಸೆಂಬರ್ 31 ಮತ್ತು ಜನವರಿ 1ಕ್ಕೆ ಸರ್ಕಾರ ರೂಪಿಸಿರುವ ನಿಯಮದಲ್ಲಿ ವಿನಾಯತಿ ಕೊಡಬೇಕು. ರಸ್ತೆಗಳಲ್ಲಿ ಕುಣಿದಾಡುವುವವರಿಗೆ ಸರ್ಕಾರ ಬೇರೆಯ ನಿಯಮ ರೂಪಿಸಲಿ. ರಸ್ತೆಯಲ್ಲಿ ಕುಣಿಯೋರ ಪರವಾಗಿ ನಾನು ಮಾತನಾಡುವುದಿಲ್ಲ. ಅದಕ್ಕೆ ಕಠಿಣ ನಿರ್ಬಂಧವನ್ನು ಸರ್ಕಾರ ಹೇರಲಿ. ರೆಸ್ಟೋರೆಂಟ್‍ನಲ್ಲಿ ಶೇಕಡ ನೂರರಷ್ಟು ಕುಳಿತುಕೊಂಡು ಆಹಾರ ಸೇವಿಸುವ ಅವಕಾಶ ಕೊಡಬೇಕು. ಪ್ರವಾಸಿಗರಿಗೆ ಸಾರ್ವಜನಿಕರಿಗೆ ಎಲ್ಲೆಲ್ಲಿ ಎಷ್ಟೆಷ್ಟು ಅವಕಾಶ ಸರ್ಕಾರ ಕೊಟ್ಟಿದೆ ಎಂಬುದು ನಮಗೆ ಗೊತ್ತು ನಾನು ಅದನ್ನು ಪ್ರಶ್ನೆ ಮಾಡುವುದಿಲ್ಲ. ಯಾವ ವಲಯವನ್ನು ನಾನು ಗುರುತಿಸಲು ಹೋಗುವುದಿಲ್ಲ. ಇದನ್ನೂ ಓದಿ: ಡಿ.28 ರಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ ಜಾರಿ – ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್
ಕುಣಿದಾಟ ಮಾಡಲು ಆರ್ಕೆಸ್ಟ್ರಾಗಳನ್ನು ನಿಯೋಜಿಸಲು ದೊಡ್ಡ ದೊಡ್ಡ ಕಾರ್ಯಕ್ರಮಗಳ ಆಯೋಜನೆ ಮಾಡುವ ಬಗ್ಗೆ ನಾವು ನಮ್ಮ ಬೇಡಿಕೆಯನ್ನು ಸಲ್ಲಿಸುತ್ತಿಲ್ಲ. ನಮ್ಮ ವ್ಯಾಪಾರದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾವು ನಮ್ಮ ವ್ಯಾಪಾರಕ್ಕೆ ಬಂಡವಾಳ ಹಾಕಿದ್ದೇವೆ ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ. ಹೊಸವರ್ಷವನ್ನು 10 ಗಂಟೆಗೆ ಆಚರಿಸಲು ಸಾಧ್ಯವಿಲ್ಲ. ಹೊಸವರ್ಷ ಬರುವುದೇ 12 ಗಂಟೆಗೆ. ಒಂದು ರೆಸ್ಟೋರೆಂಟ್‌ಗೆ ಬಂದು ಕೇಕ್ ಕಟ್ ಮಾಡುವ ಅವಕಾಶವನ್ನು ಸರ್ಕಾರ ಕೊಡುತ್ತಿಲ್ಲ ಇದು ಅನ್ಯಾಯ. ಇದನ್ನೂ ಓದಿ: ನಿಷೇಧವಿದ್ದರೂ ಎಣ್ಣೆ ಪಾರ್ಟಿ ಮಾಡಿದ ವೈದ್ಯ ಅರೆಸ್ಟ್!
ರಾಜ್ಯದಲ್ಲಿ ಸಾವಿರಾರು ವೆಜಿಟೇರಿಯನ್ ರೆಸ್ಟೋರೆಂಟ್ಸ್ ನಾನ್ ವೆಜಿಟೇರಿಯನ್ ರೆಸ್ಟೋರೆಂಟ್ಸ್‌ಗಳು ಇವೆ. ಇವರುಗಳ ಪಾಡು ಏನು? ಲಾಭ ಮಾಡುವ ಉದ್ದೇಶ ಅಲ್ಲದಿದ್ದರೂ ಸರ್ಕಾರ ನಷ್ಟವಾಗಲು ಬಿಡಬಾರದು. ಹಿಂದೆ ಇದ್ದ ವ್ಯಾಪಾರಕ್ಕೆ ಹೋಲಿಸಿದ್ದಾರೆ ಶೇಕಡ 36, 37% ರಷ್ಟು ಮಾತ್ರ ವ್ಯಾಪಾರವಾಗುತ್ತಿದೆ. ಸರ್ಕಾರ ಈ ನಿಯಮದಿಂದ cl2 ಮತ್ತು ವೈನ್ ಶಾಪ್‍ನಲ್ಲಿ ಮಾತ್ರ ವ್ಯಾಪಾರ ಹೆಚ್ಚಾಗಲಿದೆ ಎಲ್ಲರೂ ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗಿ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.