ಬೆಂಗಳೂರು: ಜನರಿಗೆ ತೊಂದರೆ ಕೊಡೋಕೆ ಸರ್ಕಾರಕ್ಕೆ ಇಷ್ಟ ಇಲ್ಲ. ಬೆಂಗಳೂರಿನಲ್ಲಿ ಟಫ್ ರೂಲ್ಸ್ ಬೇಕಾ..? ಬೇಡವಾ..? ಅಂತ ನಾಳೆಯ ಸಭೆಯಲ್ಲಿ ಚರ್ಚೆ ಆಗುತ್ತೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಿಎಂ ನೇತೃತ್ವದಲ್ಲಿ ಸಭೆ ಇದೆ. ನಾಳೆಯ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ತೀವಿ. ತಜ್ಞರು ವರದಿ ಕೊಟ್ಟಿದ್ದಾರೆ. 1.20 ಲಕ್ಷ ವಸ್ರ್ಟ್ ಕೇಸ್ ಬರುತ್ತೆ ಅಂತ ತಜ್ಞರು ಹೇಳಿದ್ದಾರೆ. ಬೆಸ್ಟ್ ಕೇಸ್ ಆದ್ರೆ 60-70 ಕೇಸ್ ಬರುತ್ತೆ ಅಂತ ತಜ್ಞರು ಹೇಳಿದ್ದಾರೆ. ತಜ್ಞರ ಜೊತೆ ಚರ್ಚೆ ಬಳಿಕ ಮುಂದಿನ ತೀರ್ಮಾನ ಮಾಡ್ತೀವಿ ಎಂದು ಹೇಳಿದರು. ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳಿಗೆ ಆಹ್ವಾನ ಇಲ್ಲ
ನಾಳೆ ಸಭೆಯಲ್ಲಿ ಅಂಕಿ ಅಂಶಗಳ ಮೇಲೆ ಚರ್ಚೆ ಆಗುತ್ತೆ. ಈಗ ತೆಗೆದುಕೊಂಡಿರೋ ಕ್ರಮಗಳ ಇಂಪ್ಯಾಕ್ಟ್ ಬಗ್ಗೆ ಚರ್ಚೆ ಮಾಡ್ತೀವಿ. ತಜ್ಞರ ಸಲಹೆಯಂತೆ ಕ್ರಮ ತಗೋತೀವಿ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಿಎಂ ನಾಳೆ ತೀರ್ಮಾನ ಮಾಡ್ತಾರೆ. ಜನರಿಗೆ ತೊಂದರೆ ಕೊಡೋದ್ರಿಂದ ಸರ್ಕಾರಕ್ಕೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಎಲ್ಲವೂ ವೈಜ್ಞಾನಿಕವಾಗಿ ತೀರ್ಮಾನ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಜ.31ರ ವರೆಗೆ ಟಫ್ ರೂಲ್ಸ್ ಜಾರಿ
ಬಳ್ಳಾರಿಯಲ್ಲಿ ಟೆಸ್ಟಿಂಗ್‍ನಲ್ಲಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿ, ವ್ಯಕ್ತಿ ವರದಿ ಬಂದ ಬಳಿಕ ಎಷ್ಟು ಗಂಟೆ ಬಳಿಕ ಮತ್ತೆ ಟೆಸ್ಟ್ ಮಾಡಿಸಿಕೊಂಡಿದ್ದಾರೆ ಅಂತ ನೋಡಬೇಕು. ಅದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಬಳ್ಳಾರಿ ಡಿಹೆಚ್‍ಓ ರಿಂದ ಮಾಹಿತಿ ಪಡೆಯುತ್ತೇನೆ. ಔಷಧಿ ಕಿಟ್ ಗಳನ್ನ ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ಬೆಂಗಳೂರಿಲ್ಲಿ ಔಷಧಿ ಕಿಟ್ ವಿತರಣೆ ಪ್ರಾರಂಭ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ಜಿಲ್ಲೆಗಳಿಗೂ ಔಷಧಿ ಕಿಟ್ ವಿತರಣೆ ಕಾರ್ಯ ಪ್ರಾರಂಭ ಮಾಡ್ತೀವಿ ಎಂದರು.