ಯಾದಗಿರಿ: ಬೈಕ್‌ಗೆ ಹಿಂಬದಿಯಿಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ (Surapura) ತಾಲೂಕಿನ ತಿಂಥಣಿ ಕಮಾನ್ ಬಳಿ ನಡೆದಿದೆ.
ಮೃತರನ್ನು ಶಹಾಪುರದ ಹಳಿಸಗರ ನಿವಾಸಿಗಳಾದ ಪತಿ ಆಂಜನೇಯ (35), ಪತ್ನಿ ಗಂಗಮ್ಮ (28), ಮಕ್ಕಳಾದ ಪವಿತ್ರ (5) ರಾಯಪ್ಪ (3) ಹಾಗೂ ಆಂಜನೇಯನ ಸಹೋದರನ ಮಗ ಹನುಮಂತ (1) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಅತ್ಯಾಚಾರ ಅಪರಾಧದ ವ್ಯಾಪ್ತಿಗೆ `ಶವ ಸಂಭೋಗ’ – ಕರ್ನಾಟಕ ಸರ್ಕಾರದ ಮನವಿ ತಿರಸ್ಕರಿಸಿದ ಸುಪ್ರೀಂ
Advertisement
Advertisement
ಮೃತ ಆಂಜನೇಯ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಕರೆದುಕೊಂಡು ಒಂದೇ ಬೈಕ್‌ನಲ್ಲಿ ಹಳಿಸಗರ ಗ್ರಾಮದಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮೆಟಮರಡಿ ದೊಡ್ಡಿಯಲ್ಲಿ ಗುರುವಾರ ನಡೆಯಲಿದ್ದ ಜಾತ್ರೆಗಾಗಿ ಹೊರಟ್ಟಿದ್ದರು. ಈ ವೇಳೆ ಸರ್ಕಾರಿ ಬಸ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
Advertisement
ಸುರುಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ತಾಳ್ಮೆ ಕಳೆದುಕೊಂಡಿದ್ದೇಕೆ..? – ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರನಿಗೆ ಹೀಗೇಕೆ ಹೇಳಿದ್ರು?