– ಸತತ 1 ಗಂಟೆಗಳ ಕಾಲ ನಿಂತಲ್ಲೇ ನಿಂತ ವಾಹನಗಳು
ಬೆಂಗಳೂರು: ಗೂಡ್ಸ್ ಲಾರಿ (Goods Lorry) ಮೆಟ್ರೋ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ನಾಗವಾರ-ಹೆಬ್ಬಾಳ (Nagavara – Hebbal) ಮಾರ್ಗದ ಕೆಂಪಾಪುರದ ಬಳಿ ನಡೆದಿದೆ.
Advertisement
ಇಂದು (ಸೆ.20) ಬೆಳಗ್ಗೆ 7ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು. ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್
Advertisement
Advertisement
ನಾಗವಾರ-ಹೆಬ್ಬಾಳ ಮಾರ್ಗದ ಕೆಂಪಾಪುರದ ಬಳಿಯಿರುವ ಔಟರ್‌ರಿಂಗ್ ರೋಡ್ ಸರ್ವೀಸ್ ರಸ್ತೆಯ ಮುಖ್ಯರಸ್ತೆಯಲ್ಲಿ 10 ಚಕ್ರದ ಲಾರಿ ಮೆಟ್ರೋ ಕಾಮಗಾರಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಎರಡು ಜೆಸಿಬಿ ಬಳಸಿ ಪೊಲೀಸರು ಲಾರಿಯನ್ನು ತೆಗೆಯಲು ಪ್ರಯತ್ನಪಡುತ್ತಿದ್ದಾರೆ.
Advertisement
ಈ ಅವಘಡದಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, 10ಕಿಮೀವರೆಗೂ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ಹೆಬ್ಬಾಳದಿಂದ ರಾಮಮೂರ್ತಿನಗರದವರೆಗೆ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದಾಗಿ ಸತತ 1 ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತು, ವಾಹನ ಚಾಲಕರು ಪರದಾಡುವಂತಾಯಿತು. ಕಾದು ಬೇಸತ್ತು ಹೋಗಿ, ಕೊನೆಗೆ ಟೈಂ ಆದ ಹಿನ್ನೆಲೆ ಬೈಕ್ ಸವಾರರು ಅಪಘಾತಗೊಂಡಿರುವ ಲಾರಿ ಕೆಳಗೆ ನುಗ್ಗಿಸಿ ಮುಂದೆ ಸಾಗುತ್ತಿದ್ದಾರೆ ಇದನ್ನೂ ಓದಿ: ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ – ಹೆಚ್.ಡಿ ರೇವಣ್ಣ ಸವಾಲ್