-ಜೂನ್ ತಿಂಗಳ ಅಂತ್ಯದಿಂದ ಜಾರಿಗೆ ಬರುವ ಸಾಧ್ಯತೆ
ನವದೆಹಲಿ: ಪಿಎಫ್ ಸೌಲಭ್ಯ ಹೊಂದಿರುವವರಿಗೆ ಕೇಂದ್ರ ಸರ್ಕಾರ (Central Govt) ಸಿಹಿಸುದ್ದಿ ಕೊಟ್ಟಿದ್ದು, ಯುಪಿಐ, ಎಟಿಎಂನಿಂದ ಶೇ.75ರಷ್ಟು ಪಿಎಫ್ (PF) ಹಣ ವಿತ್‌ಡ್ರಾಗೆ ಅವಕಾಶ ನೀಡಿದೆ.
ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ (Mansukh Mandaviya) ಅವರು ಸುಳಿವು ನೀಡಿದ್ದಾರೆ. ಬ್ಯಾಂಕ್ ಖಾತೆ ಹೊಂದಿರುವ ಯುಪಿಐಗಳು, ಇಪಿಎಫ್ ಲಿಂಕ್ ಹೊಂದಿರುವ ಎಟಿಎಂಗಳಲ್ಲಿ ಶೇ.75ರಷ್ಟು ಪಿಎಫ್ ಹಣವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಸೌಲಭ್ಯವು ಇದೇ ಜೂನ್ ತಿಂಗಳ ಅಂತ್ಯದಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ – ಒಂದು ಮತ ತಿರಸ್ಕೃತ
ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜೊತೆ ಪ್ರಾಯೋಗಿಕ ಪರೀಕ್ಷೆಗಳೂ ಪೂರ್ಣಗೊಂಡಿವೆ. ಇದರ ಜೊತೆಗೆ ಇಪಿಎಫ್‌ಓ 3.0ಗೆ ಸುಧಾರಣೆ ತರಲಾಗಿದ್ದು, ಪಿಎಫ್ ಕ್ಲೈಮ್‌ನ ಆಟೋಸೆಟಲ್‌ಮೆಂಟ್ ಮಿತಿಯನ್ನು 1 ಲಕ್ಷ ರೂ.ಯಿಂದ 5 ರೂ.ಗೆ ಏರಿಕೆ ಮಾಡಲಾಗಿದೆ. ಇದಕ್ಕಾಗಿ ಫಲಾನುಭವಿಗಳು ಉಮಂಗ್ ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಷನ್ ತಂತ್ರಜ್ಞಾನವನ್ನು ಬಳಸಬೇಕಿದೆ. ಈ ಮಧ್ಯೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಪಿಎಫ್ ಬಡ್ಡಿದರವನ್ನು 8.25ಕ್ಕೆ ನಿಗದಿ ಮಾಡಲಾಗಿದ್ದು, ಈ ತಿಂಗಳಿನಿಂದಲೇ ಅನ್ವಯ ಆಗಲಿದೆ.
