ತಿರುವನಂತಪುರಂ: ಶಬರಿಮಲೆ ಯಾತ್ರೆ ಕೈಗೊಳ್ಳುವ ಲಕ್ಷಾಂತರ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಯಾತ್ರಿಕರು ದೇಗುಲದಿಂದಲೇ ಅರವಣ, ಅಪ್ಪಂ ಹಾಗೂ ಇತರ ಪ್ರಸಾದಗಳನ್ನು ‘ಸ್ಪೀಡ್ ಪೋಸ್ಟ್’ ಮೂಲಕ ಮನೆ ಬಾಗಿಲಿಗೆ ಕಳುಹಿಸುವ ವಿಶೇಷ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ.
ಮುಂಬರುವ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯ ವೇಳೆ ಈ ನೂತನ ಸೌಲಭ್ಯ ಜಾರಿಗೆ ಬರಲಿದೆ. ಸಾಮಾನ್ಯವಾಗಿ ಯಾತ್ರೆಯ ವೇಳೆ ಭಕ್ತರು ಪ್ರಸಾದದ ಡಬ್ಬಿಗಳನ್ನು ತಮ್ಮೊಂದಿಗೆ ಹೊತ್ತು ತರುವುದು ಕಷ್ಟಕರವಾಗಿತ್ತು. ಈ ಹೊಸ ವ್ಯವಸ್ಥೆಯಿಂದಾಗಿ ಭಕ್ತರು ದೇವಾಲಯದಲ್ಲೇ ಕಾಣಿಕೆ ಮತ್ತು ಪ್ರಸಾದವನ್ನು ಬುಕ್ ಮಾಡಬಹುದಾಗಿದೆ. ಯಾತ್ರಿಕರು ತಮ್ಮ ಪ್ರವಾಸ ಮುಗಿಸಿ ಮನೆಗೆ ಹಿಂತಿರುಗುವ ಹೊತ್ತಿಗೆ, ಅಂಚೆ ಇಲಾಖೆಯ ಮೂಲಕ ಪ್ರಸಾದದ ಪಾರ್ಸೆಲ್ಗಳು ಸುರಕ್ಷಿತವಾಗಿ ಅವರ ಮನೆ ಬಾಗಿಲಿಗೆ ತಲುಪಲಿವೆ. ಇದನ್ನೂ ಓದಿ: ದೆಹಲಿಯಲ್ಲಿ ಡಬಲ್ ಮರ್ಡರ್; ಗುಂಡಿಕ್ಕಿ ಯುವಕನ ಹತ್ಯೆ – ಸೇಡು ತೀರಿಸಿಕೊಳ್ಳಲು ಹಂತಕನನ್ನೇ ಕೊಂದ ಸಹೋದರ
ಬುಕಿಂಗ್ ಕೇಂದ್ರ ಎಲ್ಲಿದೆ?
ಭಕ್ತರ ಅನುಕೂಲಕ್ಕಾಗಿ ಶಬರಿಮಲೆ ದೇವಸ್ಥಾನದ ಸಂಕೀರ್ಣದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಅರವಣ ಮತ್ತು ಅಪ್ಪಂ ವಿತರಣಾ ಕೌಂಟರ್ಗಳ ಪಕ್ಕದಲ್ಲೇ ಈ ವಿಶೇಷ ಪಾರ್ಸೆಲ್ ಬುಕಿಂಗ್ ಕೇಂದ್ರವನ್ನು ತೆರೆಯಲಾಗುತ್ತಿದೆ. ಭಕ್ತರು ಪ್ರಸಾದ ಖರೀದಿಸಿದ ತಕ್ಷಣ ಅಲ್ಲೇ ವಿಳಾಸ ನೀಡಿ ಪಾರ್ಸೆಲ್ ಬುಕ್ ಮಾಡಬಹುದಾಗಿದೆ.ಇದನ್ನೂ ಓದಿ: ಮೇಕೆದಾಟು ಯೋಜನೆ ಆಗಬೇಕು ಅಂದ್ರೆ ಬಿಜೆಪಿ ಸರ್ಕಾರವೇ ಬರಬೇಕು: ಆರ್. ಅಶೋಕ್
