ನವದೆಹಲಿ: ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಸಿಹಿ ಸುದ್ದಿ. ಹೊಸ ವರ್ಷಕ್ಕೆ ಎಲ್‌ಪಿಜಿ ಗ್ರಾಹಕರು ಇನ್ನೂ ಹೆಚ್ಚಿನ ಸಂಭ್ರಮಾಚರಣೆ ಮಾಡುವಂತಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ಬೆಲೆಯೂ ಇಳಿಕೆಯಾಗಿದೆ. ಭಾರತದ ತೈಲ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 102.5 ರೂ.ಗಳಿಗೆ ಇಳಿಸಿದೆ.
Advertisement
ಈ ಹೊಸ ಬೆಲೆ ಜನವರಿ 1 ರಿಂದ ಜಾರಿಗೆ ಬಂದಿದೆ. ದೆಹಲಿಯಲ್ಲಿ ಇಂದು 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಬೆಲೆ 1,998.5 ರೂ.ಯಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು
Advertisement
Advertisement
19 ಕೆಜಿಯ ಗ್ಯಾಸ್ ಸಿಲಿಂಡರ್‌ಗಳನ್ನು ಹೆಚ್ಚಾಗಿ ರೆಸ್ಟೋರೆಂಟ್, ಟೀ ಸ್ಟಾಲ್ ಹಾಗೂ ತಿನಿಸುಗಳ ಅಂಗಡಿಗಳಲ್ಲಿ ಬಳಸಲಾಗುತ್ತದೆ. ಇದೀಗ ಬೆಲೆ ಇಳಿಕೆಯಿಂದಾಗಿ ಮುಖ್ಯವಾಗಿ ಹೊಟೇಲ್ ಉದ್ಯಮದವರು ಖುಷಿಪಡುವಂತಾಗಿದೆ.
Advertisement
ಕಳೆದ ತಿಂಗಳು ಡಿಸೆಂಬರ್ 1 ರಂದು 19 ಕೆಜಿಯ ವಾಣಿಜ್ಯ ಗ್ಯಾಸ್‌ನ ಬೆಲೆಯನ್ನು 100 ರೂ.ಗಳಿಗೆ ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ 19 ಕೆಜಿಯ ಗ್ಯಾಸ್‌ನ ಬೆಲೆ 2,101 ರೂ. ಯಾಗಿತ್ತು. 2012-13 ರ ವೇಳೆಯಲ್ಲಿಯೂ ಇದೇ ರೀತಿ ಯಾಗಿ 19 ಕೆಜಿಯ ವಾಣಿಜ್ಯ ಗ್ಯಾಸ್‌ನ ಬೆಲೆಯನ್ನು ಅತೀ ಹೆಚ್ಚು ಬೆಲೆ ಎಂದರೆ 2200 ರೂ.ಯಷ್ಟು ದುಬಾರಿಯಾಗಿಸಿದ್ದ ದಾಖಲೆ ಇದೆ. 14.2 ಕೆಜಿ, 5 ಕೆಜಿ, 10 ಕೆಜಿಯ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿಲ್ಲ. ಇದನ್ನೂ ಓದಿ: ಈ ವರ್ಷ ನನ್ನ ಮೇಲೆ ಕಡಿಮೆ ಪೊಲೀಸ್ ಪ್ರಕರಣ, ಎಫ್‌ಐಆರ್ ದಾಖಲಾಗಲಿ: ಕಂಗನಾ ಪ್ರಾರ್ಥನೆ
ಎಲ್ಲಿ ಎಷ್ಟು ದರ?
ಬೆಂಗಳೂರು 2,083 ರೂ., ದೆಹಲಿ 1998.50 ರೂ., ಕೋಲ್ಕತ್ತಾ 2,076 ರೂ., ಮುಂಬೈ 1,948.50 ರೂ. ಚೆನ್ನೈ 2,131 ರೂ.