ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಜಿಬಿಎ (GBA) ಗುಡ್ ನ್ಯೂಸ್ ನೀಡುತ್ತಿದೆ. ಅದರಲ್ಲೂ ಇ-ಖಾತಾ (e-Khata) ಆಗದೇ ಇರುವವರಿಗೆ ಮನೆ ಬಾಗಿಲಿಗೆ ಇ-ಖಾತಾ ತಲುಪಿಸಲು ಮುಂದಾಗಿದೆ. ಇದೇ ಮೇ 16ರಿಂದ ಬೃಹತ್ ಇ ಖಾತಾ ಮೇಳ ಮಾಡಲು ಜಿಬಿಎ ನಿರ್ಧರಿಸಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಕಡೆಗಳಲ್ಲಿ ಇ-ಖಾತಾ ಮೇಳ ನಡೆಸಲಿದ್ದಾರೆ. ಸುಮಾರು 25 ಲಕ್ಷ ಖಾತಾಗಳನ್ನ ಇ-ಖಾತಾ ವ್ಯಾಪ್ತಿಗೆ ತರುವುದಕ್ಕೆ ಮುಂದಾಗಿದ್ದಾರೆ. ಮೇ 16ರ ನಂತರ ಪ್ರತಿ ಶನಿವಾರ ಇ-ಖಾತಾ ಮೇಳ ನಡೆಸಲಿದ್ದು, ಬೆಂಗಳೂರಿಗರು ಅಗತ್ಯ ದಾಖಲೆಗಳನ್ನ ತೆಗೆದುಕೊಂಡು ಇ-ಖಾತಾಗೆ ಅರ್ಜಿ ಅಪ್ಲೈ ಮಾಡಿ ಇ-ಖಾತಾವನ್ನ ಪಡೆಯಬಹುದಾಗಿದೆ. ಇದನ್ನೂ ಓದಿ: ಅಡುಗೆ ಎಣ್ಣೆ ಬಳಕೆ ಮಿತಿಗೊಳಿಸಲು ಮೋದಿ ಕರೆ ಬೆನ್ನಲ್ಲೇ ಎಣ್ಣೆ ದರ ಇಳಿಕೆ – ಅಕ್ಕಿ ರೇಟ್ ಏರಿಕೆ
25 ಲಕ್ಷ ಆಸ್ತಿಯನ್ನ ಇ-ಖಾತಾ ವ್ಯಾಪ್ತಿಗೆ ತರುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ 10 ಲಕ್ಷ ಇ-ಖಾತಾಗಳನ್ನ ವಿತರಣೆ ಮಾಡಲಾಗಿದೆ. ಇ-ಖಾತಾ ಮೇಳದಲ್ಲಿ ನೇರವಾಗಿ ಸಾರ್ವಜನಿಕರೇ ಇ-ಖಾತಾ ಪಡೆಯಬಹುದು. ಯಾವುದೇ ಮಧ್ಯವರ್ತಿಗಳ ಕಾಟ ಇರಲ್ಲ, ಲಂಚಕ್ಕೆ ಬೇಡಿಕೆ ಇರಲ್ಲ. ಇದನ್ನೂ ಓದಿ: ಪಾಕ್‌ನಿಂದ ಡಬಲ್ ಗೇಮ್ – ಇರಾನ್ ಯುದ್ಧ ವಿಮಾನಗಳಿಗೆ ರಹಸ್ಯ ಆಶ್ರಯ!
ಯಾವೆಲ್ಲಾ ದಾಖಲಾತಿ ಬೇಕು?
– ಸೇಲ್ ಡೀಡ್ / ಟೈಟಲ್ ಡೀಡ್
– ಪ್ರಾಪರ್ಟಿ ಟ್ಯಾಕ್ಸ್ ರಸೀದಿ
– ಎಸ್‌ಎಎಸ್ ಪ್ರಾಪರ್ಟಿ ಟ್ಯಾಕ್ಸ್ ಐಡಿ
– ಆಧಾರ್ ಕಾರ್ಡ್ ಮತ್ತು ಇ ಕೈವೈಸಿ ಆಗಿದ್ರೆ ಒಳ್ಳೆದು
– ಇಸಿ
– ಬೆಸ್ಕಾಂ ಬಿಲ್
– ಆಸ್ತಿಯ ಜಿಪಿಎಸ್ ಲೊಕೆಷನ್

