ಬೆಂಗಳೂರು: ಪದವಿ, ವೃತ್ತಿಪರ ಕೋರ್ಸ್ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಪಾಸ್‌ಗಳ ಅವಧಿಯನ್ನು ವಿಸ್ತರಣೆ ಮಾಡಿದೆ.
Advertisement
ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2022ರ ಆಗಸ್ಟ್‌ನಿಂದ ನವೆಂಬರ್‌ವರೆಗೂ ಪರೀಕ್ಷೆಗಳು ನಡೆಯಲಿದೆ. ಈ ಹಿನ್ನಲೆ ಪಾಸ್ ಅವಧಿ ವಿಸ್ತರಣೆಗೆ ನಿರ್ದೇಶನ ಬಂದಿದ್ದು, ಕೆಎಸ್‌ಆರ್‌ಟಿಸಿ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಶಿಸ್ತು ಮೀರಿದವರ ವಿರುದ್ಧ ಶಿಸ್ತುಕ್ರಮಕ್ಕೆ ಸಿದ್ಧತೆ
Advertisement
Advertisement
ಪ್ರಸ್ತುತ ವಿದ್ಯಾರ್ಥಿ ಪಾಸ್ ಮೊತ್ತ ವರ್ಷಕ್ಕೆ 900 ರೂ. ಇದೆ. ವಿದ್ಯಾರ್ಥಿಗಳ ಪರೀಕ್ಷೆಗೆ ಅನುಗುಣವಾಗಿ 1 ಅಥವಾ 2 ತಿಂಗಳಿಗೆ ಮಾತ್ರ ಪಾಸ್ ವಿಸ್ತರಣೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ಮೂಲಕ ತಿಳಿಸಿದೆ. ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ ಇಲ್ಲ: ಸುನಿಲ್ ಕುಮಾರ್ ಸ್ಪಷ್ಟನೆ
Advertisement
ಆದರೆ ವಿದ್ಯಾರ್ಥಿಗಳು 1 ಅಥವಾ 2 ತಿಂಗಳ ನಿಗದಿತ ಪಾಸ್ ಮೊತ್ತವನ್ನು ಕಟ್ಟಬೇಕಿದೆ. ಅಂದರೆ, 120 ರಿಂದ 130 ರೂ. ಕಟ್ಟಿ ರಶೀದಿ ಪಡೆಯಬೇಕು. ವಿದ್ಯಾರ್ಥಿಗಳು ಬಸ್‌ಗಳಲ್ಲಿ ಪ್ರಯಾಣಿಸುವಾಗ ನಿರ್ವಾಹಕರು ಕೇಳಿದ ಸಂದರ್ಭದಲ್ಲಿ ಕಡ್ಡಾಯವಾಗಿ ರಶೀದಿ ಮತ್ತು ಪಾಸ್ ತೋರಿಸಬೇಕು. ಎಲ್ಲಾ ಚಾಲಕರು, ನಿರ್ವಾಹಕರು ಹಾಗೂ ತನಿಖಾ ಸಿಬ್ಬಂದಿ ಇದರ ಬಗ್ಗೆ ತಿಳಿದಿರಬೇಕು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.