‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಾನಾ ತಿರುವುಗಳನ್ನು ಪಡೆದು 90ನೇ ದಿನದತ್ತ ಮುನ್ನುಗ್ಗುತ್ತಿರುವ ಬಿಗ್ ಮನೆ ವೇದಿಕೆಯಲ್ಲಿ ಮತ್ತೆ ಗೋಲ್ಡ್ ಸುರೇಶ್ (Gold Suresh) ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಮತ್ತೆ ಆಟ ಆಡಲು ಅವರಿಗೆ 2ನೇ ಚಾನ್ಸ್ ಸಿಕ್ಕಿದ್ಯಾ? ಹೇಗೆ ಎಂಬ ರೋಚಕ ಪ್ರೋಮೋವೊಂದನ್ನು ಹಂಚಿಕೊಂಡಿದ್ದಾರೆ.
ಭಾನುವಾರದ ಸೂಪರ್ ಸಂಡೇ ಕಾರ್ಯಕ್ರಮದಲ್ಲಿ ಸುದೀಪ್ ಟಾಸ್ಕ್‌ವೊಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳಲ್ಲಿ ಯಾರನ್ನಾದರೂ ತಟ್ಟಿ ಬುದ್ಧಿ ಹೇಳುವ ಅವಕಾಶ ನೀಡಿದ್ದಾರೆ. ಈ ವೇಳೆ, ಮಾತನಾಡಿದ್ರೆ ಫೌಲ್ ಕೊಡ್ತಿಯಾ? ಅಂತ ತಟ್ಟಿ ಹೇಳಿದ್ದಾರೆ ರಜತ್, ಆ ನಂತರ ಜ್ಞಾನೋದಯ ಮಾಡ್ತೀನಿ ಅಂತ್ಹೇಳಿ ಇಡೀ ಮನೆಯ ಸುದ್ದಿ ಮಾತನಾಡುತ್ತಾರೆ ಎಂದು ಹನುಮಂತ ಸುದೀಪ್ ಮುಂದೆ ಧನರಾಜ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಡಿಕೆ ಬ್ರದರ್ಸ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ
ಈ ವೇಳೆ, ಸ್ಪರ್ಧಿ ಗೋಲ್ಡ್ ಸುರೇಶ್ ಬಿಗ್ ಬಾಸ್‌ಗೆ ಸ್ಟನಿಂಗ್ ಎಂಟ್ರಿ ಕೊಟ್ಟಿದ್ದಾರೆ. ಆಗ ಸುದೀಪ್, ಮನೆಯೊಳಗೆ ನೀವಿಲ್ಲದೇ ಒಂದು ಜಾಗ ಖಾಲಿ ಹೊಡೆಯುತ್ತಿದೆ ಎಂದಿದ್ದಾರೆ. ಈ ಕ್ಷಣನೂ ಮನೆಯೊಳಗೆ ಹೋಗು ಅಂದರೆ ಖುಷಿಯಿಂದ ಹೋಗುತ್ತೇನೆ ಎಂದಿದ್ದಾರೆ. ಆಗ ಮನೆ ಮಂದಿಯೆಲ್ಲಾ ಶಾಕ್‌ನಿಂದ ನೋಡಿದ್ದಾರೆ. ಆದರೆ ದೊಡ್ಮನೆಯ ಸ್ಪರ್ಧಿಯಾಗಿ ಸುರೇಶ್ ಕಾಲಿಟ್ಟಿದ್ದಾರಾ? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
View this post on Instagram
ಇನ್ನೂ ಕಳೆದ 4 ದಿನಗಳಿಂದ ವೋಟಿಂಗ್ ಲೈನ್ ತೆಗೆದಿರಲಿಲ್ಲ. ಹಾಗಾಗಿ ಈ ವಾರ ಎಲಿಮಿನೇಷನ್ ಇರಲ್ಲ. ಮುಂದಿನ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ.