ಬೆಳಗಾವಿ: ವಾಟ್ಸಪ್ ಗ್ರೂಪ್ ಮಾಡಿಕೊಂಡು ಅದರಲ್ಲೇ ಚರ್ಚಿಸಿ ನಂತರ ದರೋಡೆಗೆ ಇಳಿಯುತ್ತಿದ್ದ 9 ಜನರ ಗ್ಯಾಂಗ್ ಒಂದನ್ನು ಗೋಕಾಕ್ (Gokak) ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೊಪಿಗಳನ್ನು ದುರ್ಗಪ್ಪ ವಡ್ಡರ್, ನಾಗಪ್ಪ ಮಾದರ್, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪೂಜೇರಿ, ರಾಮಸಿದ್ದ ತಸ್ಪಿ, ಬೀರಸಿದ್ದ ಗುಂಡಿ, ಉದ್ದಪ್ಪ ಖಿಲಾರಿ, ಪರಶುರಾಮ್ ಗೊಂದಳಿ, ಆಕಾಶ ತಳವಾರ ಎಂದು ಗುರುತಿಸಲಾಗಿದೆ. ಗೋಕಾಕ್ ಶಹರ, ಗೋಕಾಕ್ ಗ್ರಾಮೀಣ ಹಾಗೂ ಅಂಕಲಗಿ ಪೊಲೀಸ್ ಠಾಣೆಗಳಲ್ಲಿನ ಒಟ್ಟು 9 ವಿವಿಧ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕುದಿಯೋ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು!
ಆರೋಪಿಗಳು ಬೆನಚಿನಮರಡಿ ಗ್ಯಾಂಗ್ ಹಾಗೂ ಎಸ್‍ಪಿ ಗ್ಯಾಂಗ್ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ಬೆನಚಿನಮರಡಿ ಗ್ಯಾಂಗ್‍ನ 7 ಹಾಗೂ ಎಸ್ಪಿ ಗ್ಯಾಂಗ್‍ನ 2 ಜನ ಆರೋಪಿಗಳು ಸೇರಿದ್ದಾರೆ.
ಬಂಧಿತರಿಂದ ಚಿನ್ನಾಭರಣ, ದ್ವಿಚಕ್ರವಾಹನ ಸೇರಿದಂತೆ 7,89,700 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 3 ಸಾವಿರ ರೂ. ಸಾಲ ಮರುಪಾವತಿಸದ್ದಕ್ಕೆ ವ್ಯಕ್ತಿಯ ಬೆತ್ತಲೆ ಮೆರವಣಿಗೆ!
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]