– ಎಲ್ಲಾ ನನಗೆ, ನನ್ನ ಮಕ್ಕಳಿಗೆ ಅಂತಾ ಇರೋರು ಗೌಡ್ರು ಎಂದ ಇಬ್ರಾಹಿಂ
ಬೆಂಗಳೂರು: ದೇವೇಗೌಡರು (HD Devegowda) ಯಾರನ್ನೂ ಬೆಳೆಯಲು ಬಿಡಲಿಲ್ಲ. ಎಲ್ಲ ನನಗೆ, ನನ್ನ ಮಕ್ಕಳಿಗೆ ಅಂತಾ ಇರೋರು. ಒಕ್ಕಲಿಗರಲ್ಲೂ ಯಾರನ್ನೂ ಬೆಳೆಸಿಲ್ಲ. ಗೌಡ್ರೇ.. ದೇವರು ನಿಮಗೆ ಒಳ್ಳೆಯದು ಮಾಡಲ್ಲ ಎಂದು ಸಿ.ಎಂ ಇಬ್ರಾಹಿಂ (CM Ibrahim) ಕಿಡಿ ಕಾರಿದ್ದಾರೆ.
Advertisement
ಪಕ್ಷದ ಮೈತ್ರಿ ನಿರ್ಧಾರ, ಪಕ್ಷದ ನಾಯಕರ ವಿರುದ್ಧ ಬಂಡೆದಿದ್ದ ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಲಾಗಿದೆ. ಈ ಕುರಿತು `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಅವರು, ನನ್ನ ಪದಚ್ಯುತಿ ಅಲ್ಪಸಂಖ್ಯಾತ ವಿರೋಧಿ ನಡೆ ಅಲ್ಲ. ಯಾಕಂದ್ರೆ ನಾನು ಕನ್ನಡಿಗ, ಒಂದು ಜಾತಿಗೆ ಸೀಮಿತ ಆಗಿಲ್ಲ. ಕನ್ನಡದ ಜನ ನನ್ನ ಪರ ಇದ್ದಾರೆ, ಜನ ಇವರಿಗೆ ಉತ್ತರ ಕೊಡ್ತಾರೆ. ಜನತಾ ದಳ ವಿಸರ್ಜನೆ ಮಾಡೋಕಾಗಲ್ಲ. ಏಕೆಂದರೆ ನಮ್ಮದೇ ನಮ್ಮದೇ ನಿಜವಾದ ಜನತಾ ದಳ (JDS), ಕಾನೂನು ಹೋರಾಟದ ಜೊತೆಗೆ, ಚುನಾವಣಾ ಆಯೋಗದಲ್ಲೂ ಹೋರಾಟ ಮಾಡ್ತೇನೆ ಎಂದು ಗುಡುಗಿದ್ದಾರೆ.
Advertisement
Advertisement
ಮತ್ತೆ ಕಾಂಗ್ರೆಸ್ ಪಕ್ಷ (Congress Party) ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಇನ್ನೂ ಡೈವೋರ್ಸ್ ಆಗಿಲ್ಲ, ಈಗಲೇ ಏನ್ ಹೇಳಕ್ಕಾಗುತ್ತೆ? ಕಾಂಗ್ರೆಸ್‌ಗೆ ಹೋಗ್ತೀವೋ, ಜೆಡಿಎಸ್‌ಗೆ ಬರ್ತಾರೋ ನೋಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇವೇಗೌಡರು ನನ್ನ ತಂದೆ ಸಮಾನ ಅಂದುಕೊಂಡಿದ್ದೆ, ನನ್ನನ್ನ ಕೆಣಕಿದ್ದೀರಿ ಪರಿಣಾಮ ಕಾದು ನೋಡಿ: ಇಬ್ರಾಹಿಂ ಎಚ್ಚರಿಕೆ
Advertisement
ಮುಂದುವರಿದು, ಮಹಾಭಾರತದಲ್ಲಿ ದುರ್ಯೋಧನನಿಗೆ ಆದ ಸ್ಥಿತಿಯೇ ಜನತಾದಳಕ್ಕೆ ಆಗುತ್ತದೆ. ಈ ವಯಸ್ಸಿನಲ್ಲಿ ಮಗನ ಸಲುವಾಗಿ ಯಾಕೆ ಇವರು ಇಷ್ಟು ಸುಳ್ಳು ಹೇಳಬೇಕು? ಅಮಿತ್ ಶಾ ಹತ್ರ ಪ್ರಜ್ವಲ್ ಕರೆದುಕೊಂಡು ಹೋಗಿದ್ರಾ? ನಿನ್ನೆ ತಿಪ್ಪೇಸ್ವಾಮಿ ಕೈಯಲ್ಲಿ ಕೂತು ಮಾತಾಡೋಣ ಅಂತಾ ಫೋನ್ ಮಾಡಿಸಿ, ಎಲ್ಲಾ ಶಾಸಕರು, ಜಿಲ್ಲಾಧ್ಯಕ್ಷರು ನಿಮ್ಮ ಜೊತೆ ಇದ್ದಾರೆ ಅಂತಾ ತಿಳಿದುಕೊಂಡಿದ್ದೀರಾ? ತಮಿಳುನಾಡು, ಕೇರಳ ಜೆಡಿಎಸ್‌ನವರನ್ನು ನಿಮಗೆ ಮುಟ್ಟಲು ಆಯ್ತಾ? ಗೌಡ್ರೇ ದೇವರು ನಿಮಗೆ ಒಳ್ಳೆಯದು ಮಾಡಲ್ಲ ಎಂದು ಶಾಪ ಹಾಕಿದ್ದಾರೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆಚ್ಚಿದ ಬಾಂಗ್ಲಾ – ಭಾರತಕ್ಕೆ 257 ರನ್‌ಗಳ ಗುರಿ
ಎಲ್ಲಾ ನನಗೂ ನನ್ನ ಮಕ್ಕಳಿಗೆ ಅಂದರೆ ನಿಮಗೆ ಒಕ್ಕಲಿಗರ ಓಟು ಹೇಗೆ ಬರುತ್ತದೆ? ನೀವು ದೆಹಲಿ ತೋರಿಸಿ ಶಾಸಕರನ್ನು ಹೆದರಿಸುವ ಪ್ರಯತ್ನ ಮಾಡಬಹುದು, ಜನ ಎದ್ದಿದಕ್ಕೆ ರೇವಣ್ಣ ಎರಡೂವರೆ ಸಾವಿರ ಮತಕ್ಕೆ ಬಂದಿದ್ದು, ಆರ್ಥಿಕ ಬಲ ಇಲ್ಲದಿದ್ದರೆ ಇವರ ಜೊತೆ ನಿಲ್ಲುವವರು ಯಾರು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಪದಚ್ಯುತಿ- ಹಂಗಾಮಿ ಅಧ್ಯಕ್ಷರಾಗಿ ಹೆಚ್‌ಡಿಕೆ ನೇಮಕ
Web Stories