-ಯುವಕರು ಡ್ರಗ್ಸ್ ಸೇವಿಸಿ ಪೊಲೀಸ್ ಬಲೆಗೆ
ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ನೈತಿಕ ಪೊಲೀಸ್ ಗಿರಿ ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೆ ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿ ಮತ್ತು ಬಾಲಕಿಯೊಬ್ಬಳು ನಗರದ ಗುರುಪುರ ಬಳಿಯ ಚಿಲಿಂಬಿಗುಡ್ಡೆಯಲ್ಲಿ ಪತ್ತೆಯಾಗಿದ್ದಾರೆ.
ನಗರದ ಹೊರವಲಯದ ಗುರುಪುರ ಬಳಿಯ ಚಿಲಿಂಬಿಗುಡ್ಡೆಯಲ್ಲಿ ಇಬ್ಬರು ಯುವಕರ ಜೊತೆ ಯುವತಿ, ಬಾಲಕಿಯ ಪತ್ತೆಯಾಗಿದ್ದಾರೆ. ಇಬ್ಬರು ಯುವಕರಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕನಿದ್ದು, ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಹಿಂದೂ ಯುವತಿ, ಬಾಲಕಿ ಮತ್ತು ಯುವಕರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯುವಕರು ಮಾದಕ ವಸ್ತು ಸೇವನೆ ಮಾಡಿರುವ ಮಾಹಿತಿಯನ್ನು ಸಂಘಟನೆಯವರು ನೀಡಿದ್ದರಿಂದ ಯುವಕರ ಡ್ರಗ್ಸ್ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಹೀಗಾಗಿ ಶಾಕೀರ್, ಧೀರಜ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಶಾರೂಖ್ ಪುತ್ರನ ಲೆನ್ಸ್ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!
ಈ ತಂಡ ಚಿಲಿಂಬಿಗುಡ್ಡೆಗೆ ಕಾರೊಂದರಲ್ಲಿ ಬಂದಿತ್ತು. ಆದರೆ ಬಂದಿದ್ದ ಕಾರಿಗೆ ನಂಬರ್ ಪ್ಲೇಟ್ ಇಲ್ಲದೆ ಇದ್ದುದರಿಂದ ಸ್ಥಳೀಯರಿಗೆ ಅನುಮಾನ ಬಂದಿದೆ. ಹೀಗಾಗಿ ಪ್ರಾರಂಭದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ತಂಡದಲ್ಲಿದ್ದವರ ಪೂರ್ವಾಪರ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ. ತಂಡದಲ್ಲಿ ಓರ್ವಳು ಬಾಲಕಿಯಿದ್ದು, ಬಾಲಕಿಯ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಹೀಗಾಗಿ ಇಬ್ಬರು ಯುವಕರ ವಿರುದ್ಧ ಮಾದಕವಸ್ತು ಸೇವನೆಯ ಕೇಸ್ ಜೊತೆ ಪೋಕ್ಸೋ ಪ್ರಕರಣವೂ ದಾಖಲಿಸಲಾಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್