ಪ್ರಿಯಕರನೊಂದಿಗೆ ಓಡಿಹೋಗಲು ಹೆತ್ತವರಿಗೆ ವಿಷ ಇಟ್ಟ ಮಗಳು

Public TV
2 Min Read
LOVE

ಗಾಂಧಿನಗರ: ಯುವತಿಯೊಬ್ಬಳು ಪ್ರಿಯಕರನೊಂದಿಗೆ ಓಡಿಹೋಗಲು ಹೆತ್ತ ತಂದೆ ತಾಯಿಗೆ ವಿಷ ಪ್ರಾಶನ ಮಾಡಿಸಿದ ಘಟನೆ ಸೂರತ್‍ನಲ್ಲಿ ನಡೆದಿದೆ.

ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ಹೆತ್ತ ತಂದೆ ತಾಯಿಗೆ ವಿಷ ಹಾಕಿದ್ದಾಳೆ. ಆರೋಪಿತ ಯುವತಿಯನ್ನು ಖುಷ್ಬು ಎಂದು ಗುರುತಿಸಲಾಗಿದೆ. ಈಕೆಯ ಪ್ರಿಯಕರ ಸಚಿನ್ ಆಗಿದ್ದಾನೆ. ಪ್ರಿಯಕರ ಸಚಿನ್ ಜೊತೆ ಓಡಿ ಹೋಗಲು ನಿರ್ಧಾರ ಮಾಡಿದ್ದಳು. ಇದಕ್ಕೆ ಪೋಷಕರು ಅಡ್ಡಿಯಾದ್ದರಿಂದ, ಆಹಾರದಲ್ಲಿ ವಿಷ ಹಾಕಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗ್ಳೂರು ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Love

ಖುಷ್ಬು, ಸಚಿನ್ ಕುಟುಂಬವು ಸೂರತ್‍ನ ದಿಂಡೋಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಇಬ್ಬರಿಗೂ ಸ್ನೇಹ ಬೆಳೆದಿದೆ. ದಿನ ಕಳೆಯುತ್ತಿದ್ದಂತೆ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಖುಷ್ಬು ಅಪ್ರಾಪ್ತ ವಯಸ್ಸಿನವಳಾದ್ದರಿಂದ ಪೋಷಕರು ಆ ಸಂಬಂಧವನ್ನು ನಿರಾಕರಿಸಿದ್ದಾರೆ. ಇದರಿಂದಾಗಿ ಬೇಸರಗೊಂಡ ಖುಷ್ಬು ಸಚಿನ್‍ನೊಡನೆ ಮನೆಬಿಟ್ಟು ಓಡಿ ಹೋಗಿದ್ದಳು. ಖುಷ್ಬು ಕುಟುಂಬ ಅವರಿರುವ ಜಾಗವನ್ನು ಹುಡುಕಿ ಮರಳಿ ಮನೆಗೆ ಕರೆತಂದಿದ್ದರು. ಪ್ರೀತಿಯ ಮೋಹದಿಂದ ಖುಷ್ಬುವಿನ ಮನ ಬದಲಾಯಿಸಲು ಆ ನಗರವನ್ನು ಬಿಟ್ಟು ಬೇರೆಡೆಗೆ ಹೋಗಿ ಕುಟುಂಬ ವಾಸವಿದ್ದರು. ಇದನ್ನೂ ಓದಿ: 40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್‍ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ

teenage couple love marrige

ಬೇರೆಡೆಗೆ ವಾಸವಿದ್ದಾಗಲೂ ಸಹ ಖುಷ್ಬು ಮನ ಬದಲಾಗಿಲ್ಲ. ಸಚಿನ್ ಜೊತೆಗಿನ ಪ್ರೀತಿಯನ್ನು ಮತ್ತೆ ಮುಂದುವರೆಸಿದ್ದಳು. ಆದರೆ 18 ವರ್ಷ ವಯಸ್ಸಾಗುವುದನ್ನೇ ಕಾಯುತ್ತಿದ್ದು, ತನ್ನ 18ನೇ ವರ್ಷದ ಜನ್ಮದಿನದ ಎರಡು ದಿನಗಳ ಬಳಿಕ ಸಚಿನ್ ಜೊತೆಗೆ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದಾಳೆ. ಸೆಪ್ಟೆಂಬರ್ 12ನೇ ತಾರೀಕಿನಂದು ಮೆಡಿಕಲ್ ಸ್ಟೋರ್ಸ್‍ನಿಂದ ಒಂದಿಷ್ಟು ಮಾತ್ರೆಗಳನ್ನು ತಂದು ಆಹಾರದಲ್ಲಿ ಬೆರೆಸಿ ಮನೆಯವರಿಗೆಲ್ಲಾ ನೀಡಿದ್ದಾಳೆ. ಸ್ವಲ್ಪ ಸಮಯದ ಬಳಿಕ ಮನೆಯವರು ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಿದ್ದಂತೆಯೇ ಸಚಿನ್ ಆಕೆಯ ಮನೆಗೆ ಬಂದು ಖುಷ್ಬುಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ 

love hand wedding valentine day together holding hand 38810 3580 medium

ಆಕೆಯ ತಂದೆ ವಂಜಾರಾ ಅವರಿಗೆ ಎಚ್ಚರವಾದ ಬಳಿಕ, ಎಚ್ಚರ ತಪ್ಪಿ ಬಿದ್ದಿದ್ದ ಮನೆಯವರನ್ನು ಎದ್ದೇಳಿಸಲು ಪ್ರಯತ್ನಿಸಿದ್ದಾರೆ. ಈ ಕಡೆ ಖುಷ್ಬು ಮತ್ತು ಸಚಿನ್ ಮದುವೆಯಾಗಲು ಪೊಲೀಸ್ ಠಾಣೆಯನ್ನು ತಲುಪಿದ್ದಾರೆ. ಖುಷ್ಬು ತಾಯಿ ಮತ್ತು ಸಹೋದರನ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಆಸ್ಪತ್ರೆಗೆ ಕರೆತರಲಾಗಿದೆ. ತಂದೆ ವಂಜಾರಾ ಅವರು ಖುಷ್ಬು, ಸಚಿನ್ ಮತ್ತು ಸಚಿನ್ ತಂದೆ ಅಶೋಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *