ಬೆಂಗಳೂರು: ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೊದಲನೇ ದಿನ. ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದರು. ಇಂದು ಚಲನಚಿತ್ರೋತ್ಸವದ ಅಂಗವಾಗಿ ಹೆಸರಾಂತ ಸಾಹಿತಿ ಗಿರೀಶ್ ಕಾಸರವಳ್ಳಿ ಕುರಿತು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
Advertisement
NFAI (National Film Archives of India) ವತಿಯಿಂದ ಗಿರೀಶ್ ಕಾಸರವಳ್ಳಿಯ ಕುರಿತಾಗಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು. ಈ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನೀಲ್ ಪುರಾಣಿಕ್, ಗಿರೀಶ್ ಕಾಸರವಳ್ಳಿ ಸೇರಿದಂತೆ ಹಲವು ಗಣ್ಯರು ಪುಸ್ತಕವನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!
Advertisement
Advertisement
ಸುನೀಲ್ ಪುರಾಣಿಕ್ ಅವರು ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಈ ಬಾರಿಯ ಚಿತ್ರೋತ್ಸವನ್ನು ಇದೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಪರಿಚಯಿಸಿದ್ದಾರೆ. ಇದು ಭಾರತದಾದ್ಯಂತ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ ವಿನೂತನ ಮಾದರಿ. ಈ ರೀತಿಯ ಮಾದರಿ ಎಲ್ಲ ವರ್ಗದವರಿಗೂ ಅದರಲ್ಲೂ ಹಿರಿಯ ಪ್ರೇಕ್ಷಕರಿಗೆ ಸಹಾಯಕವಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮುಂದುವರೆಸಬೇಕೆಂದು ಶ್ರೀರಾವ್ ಬಯಸಿದ್ದಾರೆ ಎಂದು ತಿಳಿಸಿದರು. ಡಿಜಿಟಲ್ ಪೈರಸಿ ಕಾಟ ಹೆಚ್ಚಾಗಿರುವ ಕಾರಣ ಈ ವರ್ಷದ ಡಿಜಿಟಲ್ ಫ್ಲಾಟ್ ಫಾರಂ ಪೈರಸಿ ವಿರುದ್ಧ ಹೋರಾಡಿ, ಅದಕ್ಕೆ ಭದ್ರತೆ ಒದಗಿಸಲಾಗುತ್ತದೆ ಎಂದು ವಿವರಿಸಿದರು.
Advertisement
ತುಳು ಸಿನಿಮಾ 50 ವರ್ಷಗಳನ್ನು ಪೂರೈಸಿ, ಇಂದಿಗೆ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ವೇಳೆ ತುಳು ಚಲನಚಿತ್ರರಂಗದ ಬಗ್ಗೆ ಚರ್ಚಾಗೋಷ್ಠಿ ಸಂವಾದ ಏರ್ಪಡಿಸಲಾಗಿತ್ತು. ಈ ಗೋಷ್ಠಿಯಲ್ಲಿ ತುಳು ಚಿತ್ರರಂಗದ ಖ್ಯಾತನಾಮರಾದ ರಿಚರ್ಡ್ ಕ್ಯಾಸಲಿನೋ, ವಿಜಯ್ ಕುಮಾರ್ ಕೊಡಿಯಾಲಾ ಬೈಲು, ತಮ್ಮ ಲಕ್ಷ್ಮಣ್, ನಟ ಶಿವಧ್ವಜ್ ಭಾಗವಹಿಸಿದ್ದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ನರಹರಿ ರಾವ್, ಈ ಉತ್ಸವವನ್ನು ಯಶಸ್ವಿಗೊಳಿಸಲು ಕೋರ್ ಟೀಮ್ ಎದುರಿಸಬೇಕಾದ ಅನೇಕ ಅಡೆತಡೆಗಳನ್ನು ಬೆಳಕಿಗೆ ತಂದರು. ಇಷ್ಟು ಕಡಿಮೆ ಅವಧಿಯಲ್ಲಿ ಚಿತ್ರೋತ್ಸವು ಸಾಕಾರಗೊಂಡಿರುವುದು ಒಂದು ಪವಾಡದ ಸಾಧನೆ ಎಂದು ಬಣ್ಣಿಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ದಿ.ಪುಟ್ಟಣ್ಣ ಕಣಗಾಲ್ ಅವರ ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ಸ್ಮಾರಕವಾಗಿ ನಿರ್ಮಿಸುವ ಬಗೆಗೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಆವರಣದಲ್ಲಿ ಸುಸಜ್ಜಿತ ಪ್ರದರ್ಶನ ಮಂದಿರ ನಿರ್ಮಿಸುವ ಕುರಿತಾಗಿ ಮನವಿಯನ್ನು ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಮಾರಂಭದಲ್ಲಿಯೇ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅವಶ್ಯಕತೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಕ್ಕೆ ಸಂತೋಷವಾಗಿ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೈಭವಕ್ಕೆ ಇಂದು ಚಾಲನೆ