BollywoodCinemaLatestMain PostNational

ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರಿಗೆ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮಿರ್ಚಿ ಪ್ರಶ್ನೆಯನ್ನು ಕೇಳಿದ್ದು, ಈ ಕುರಿತು ಪ್ರಭಾಸ್  ಹಂಚಿಕೊಂಡಿದ್ದಾರೆ.

 `ರಾಧೆ ಶ್ಯಾಮ್’ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು `ಪ್ರಾಜೆಕ್ಟ್-ಕೆ’ ಶೂಟಿಂಗ್ ಸಮಯದಲ್ಲಿ ದೀಪಿಕಾ ಜೊತೆ ಕಳೆದ ಸಮಯ ಕುರಿತು ಹಂಚಿಕೊಂಡಿದ್ದಾರೆ. ಪ್ರಭಾಸ್, ದೀಪಿಕಾ ಕುರಿತು ಮಾತನಾಡಿದ್ದು, ನಾನು ದೀಪಿಕಾ ಅವರನ್ನು `ಪ್ರಾಜೆಕ್ಟ್-ಕೆ’ ಸೆಟ್‍ನಲ್ಲೇ ಮೊದಲ ಬಾರಿಗೆ ಭೇಟಿಯಾದೆ. ನನ್ನನ್ನು ದೀಪಿಕಾ ಏಕೆ ನೀವು ಹೆಚ್ಚು ನಾಚಿಕೆ ಪಡುತ್ತೀರಾ ಎಂದು ಕೇಳಿದ್ದರು ಎಂದು ದೀಪಿಕಾ ನಡುವಿನ ಅವರ ಸಂಭಾಷಣೆಯನ್ನು ಬಹಿರಂಗಪಡಿಸಿದರು. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು

ಜನರೊಂದಿಗೆ ನಾನು ಯಾವುದೇ ರೀತಿಯ ನಾಚಿಕೆಯಿಲ್ಲದೆ ಮಾತನಾಡಬೇಕು ಎಂದರೆ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತೇನೆ. ಯಾವುದೇ ವ್ಯಕ್ತಿ ಜೊತೆ ನಾನು ಫ್ರೀಯಾಗಿ ಮಾತನಾಡಬೇಕು ಎಂದರೆ ನನಗೆ ಹೊಂದಾಣಿಕೆಯಾಗಬೇಕು. ನಾನು ಒಬ್ಬ ವ್ಯಕ್ತಿ ಜೊತೆ ಮಾತನಾಡಬೇಕು ಎನಿಸಿದರೆ ಅವರನ್ನು ನಿರಂತರವಾಗಿ ಮಾತನಾಡಿಸಲು ಪ್ರಾರಂಭಿಸುತ್ತೇನೆ. ಅವರು ನನ್ನ ಕಂಪನಿ ಇಷ್ಟ ಪಡುವಂತೆ ಮಾಡುತ್ತೇನೆ ಎಂದು ತಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿಕೊಂಡರು.

ನಾನು ದೀಪಿಕಾ ಅವರನ್ನು ಮೊದಲಬಾರಿಗೆ ನೋಡಿದ್ರಿಂದ ಅವರ ಜೊತೆ ಅಷ್ಟು ಸುಲಭವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ದೀಪಿಕಾ ಜೊತೆ ಮಾತನಾಡುವುದಕ್ಕೆ ಮೊದಲು ಹಿಂಜರಿಯುತ್ತಿದ್ದೆ. ಅದಕ್ಕೆ ದೀಪಿಕಾ ಅವರು ನನಗೆ ಏಕೆ ಹೆಚ್ಚು ನಾಚಿಕೆ ಪಡುತ್ತೀರಾ ಎಂದು ಕೇಳಿದ್ದರು ಎಂದು ನಕ್ಕರು. ಇದನ್ನೂ ಓದಿ: 16 ಗಂಟೆ ಟ್ರಾನ್‍ನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ: ನೋವು ಹಂಚಿಕೊಂಡ ವಿದ್ಯಾರ್ಥಿಗಳು!

ಇದೇ ಮೊದಲಬಾರಿಗೆ ಬಾಲಿವುಡ್ ಬ್ಯೂಟಿ ದೀಪಿಕಾ ಮತ್ತು ಪ್ರಭಾಸ್ `ಪ್ರಾಜೆಕ್ಟ್-ಕೆ’ ಸಿನಿಮಾ ಮೂಲಕ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಪ್ರಾಜೆಕ್ಟ್-ಕೆ’ ಸಿನಿಮಾಗೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದು, ದಕ್ಷಿಣ ಸಿನಿರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಇದು ಒಂದಾಗಿದೆ.

Leave a Reply

Your email address will not be published. Required fields are marked *

Back to top button