ಟಾಲಿವುಡ್ನ (Tollywood) ಆನ್ ಸ್ಕ್ರೀನ್ ಬೆಸ್ಟ್ ಜೋಡಿ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಇದೀಗ ‘ಗೀತಾ ಗೋವಿಂದಂ’ ಸಿನಿಮಾ 5 ವರ್ಷ ಪೂರೈಸಿದ ಸಂತಸದಲ್ಲಿದ್ದಾರೆ. ಇದೇ ಖುಷಿಯಲ್ಲಿ ಚಿತ್ರದ ನಿರ್ದೇಶಕ ಪರಶುರಾಮ್ ಜೊತೆ ವಿಜಯ್-ರಶ್ಮಿಕಾ(Rashmika Mandanna) ಕ್ಯಾಮೆರಾಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಇಬ್ಬರ ಫೋಟೋ ವೈರಲ್ ಆಗಿರೋ ಬೆನ್ನಲ್ಲೇ ಗೀತಾ ಗೋವಿಂದಂ ‘ಪಾರ್ಟ್ 2’ಗೆ ಸಿದ್ಧತೆ ಮಡುತ್ತಿದ್ದಾರಾ? ಎಂಬ ಸುದ್ದಿ ಈಗ ಸದ್ದು ಮಾಡ್ತಿದೆ.
Advertisement
ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರುತ್ತ, ಗೀತಾ ಗೋವಿಂದಂ ಚಿತ್ರಕ್ಕೆ 5 ವರ್ಷ ಪೂರೈಸಿರುವ ಬಗ್ಗೆ ನಟಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. 5 ವರ್ಷ ಅಂತಾ ಕೈಯಲ್ಲಿ ಸಿಂಬಲ್ ತೋರಿಸುವ ಮೂಲಕ ನಿರ್ದೇಶಕ ಪರಶುರಾಮ್, ವಿಜಯ್, ರಶ್ಮಿಕಾ ಜೊತೆಯಾಗಿ ಫೋಟೋ ಕ್ಲಿಕ್ಕಿಸಿದ್ದಾರೆ. ಇದನ್ನೂ ಓದಿ:ಆಗಸ್ಟ್ 16ರಂದು ಸ್ಪಂದನಾ ಉತ್ತರಕ್ರಿಯೆ- ನಾಳೆಗೆ ಸಿದ್ಧತೆ ಹೇಗಿದೆ?
Advertisement
Advertisement
ವಿಜಯ್- ರಶ್ಮಿಕಾ ಮಂದಣ್ಣ ಕೆರಿಯರ್ಗೆ ಬಿಗ್ ಬ್ರೇಕ್ ಕೊಟ್ಟಂತಹ ಸಿನಿಮಾ ಅಂದರೆ ಗೀತಾ ಗೋವಿಂದಂ. ಚಿತ್ರ ಕಥೆ, ಸಾಂಗ್ಸ್, ಗೀತಾ ಗೋವಿಂದನ ಪ್ರಣಯ ಪ್ರಸಂಗ ಎಲ್ಲವೂ ಸಿನಿಮಾದಲ್ಲಿ ಕಮಾಲ್ ಮಾಡಿತ್ತು. ಅಂದು ಈ ಹೊಸ ಜೋಡಿ, ಸೆನ್ಸೇಷನ್ ಕ್ರಿಯೆಟ್ ಮಾಡಿತ್ತು. ಇದೀಗ ಹಿಸ್ಟರಿ ಕ್ರಿಯೇಟ್ ಮಾಡಿದ ಈ ಚಿತ್ರಕ್ಕೆ 5 ವರ್ಷ ತುಂಬಿದೆ.
Advertisement
ನಿರ್ದೇಶಕರು ಮತ್ತೆ ವಿಜಯ್(Vijay Devarakonda)- ರಶ್ಮಿಕಾ ಮತ್ತೆ ಒಟ್ಟಾಗಿರೋದು ನೋಡಿ, ಈ ಮೂವರಿಂದ ಮತ್ತೆ ಸಿನಿಮಾ ಬರಬಹುದಾ ಅಂತಾ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಕೆಲ ದಿನಗಳಿಂದ ವಿಜಯ್- ರಶ್ಮಿಕಾ ಒಟ್ಟಿಗೆ ನಟಿಸುತ್ತಾರೆ ಎಂಬ ಸುದ್ದಿಯಿದೆ. ಈಗ ಮತ್ತೆ ಭೇಟಿಯಾಗಿರೋದನ್ನ ನೋಡಿ ಗೀತಾ ಗೋವಿಂದಂ ಪಾರ್ಟ್ 2ಗೆ ಸೂಚನೆನಾ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಈ ಬಗ್ಗೆ ಪ್ಲ್ಯಾನ್ ನಡೆಯುತ್ತಿದ್ಯಾ ಎಂದು ಚಿತ್ರತಂಡ ಹೇಳುವವರೆಗೂ ಕಾಯಬೇಕಿದೆ.